Monday, December 23, 2024

ಪವನ್ ಕಲ್ಯಾಣ್​​ 4ನೇ ಮದುವೆಗಲಿದ್ದಾರೆ: ಭವಿಷ್ಯ ನುಡಿದ ವೇಣು ಸ್ವಾಮಿ

ತೆಲುಗು ರಾಜ್ಯಗಳ ಸೆಲೆಬ್ರಿಟಿ ಜ್ಯೋತಿಷಿ ಎನಿಸಿಕೊಂಡಿರುವ ವೇಣು ಸ್ವಾಮಿ, ತೆಲುಗಿನ ಜನಪ್ರಿಯ ಸ್ಟಾರ್ ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಕುರಿತು ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪವನ್ ಕಲ್ಯಾಣ್​ರ ಖಾಸಗಿ ಜೀವನ, ರಾಜಕೀಯ ಜೀವನದ ಬಗ್ಗೆ ವೇಣು ಸ್ವಾಮಿ ಮಾತನಾಡಿದ್ದಾರೆ.

ಪವನ್ ಕಲ್ಯಾಣ್ ಮುಂದೆ ಏನು ಮಾಡಿದರೆ ಅವರ ಜಿವನದಲ್ಲಿ ಏಳ್ಗೆ ಇರುತ್ತದೆ ಎಂಬ ಬಗ್ಗೆಯೂ ಭವಿಷ್ಯ ಹೇಳಿದ್ದಾರೆ. ಪವನ್ ಕಲ್ಯಾಣ್ ರ ರಾಜಕೀಯ ವಿರೋಧಿಗಳು ಅವರ ಮೂರು ಮದುವೆ ವಿಷಯವನ್ನು ಸದಾ ಪವನ್​ರ ವಿರುದ್ಧ ಅಸ್ತ್ರವಾಗಿ ಬಳಸುತ್ತಿರುತ್ತಾರೆ.

ಇದನ್ನೂ ಓದಿ: ವಾರಕ್ಕೆ 70 ಗಂಟೆ ಕೆಲಸದ ಸಲಹೆ ಹಲವರು ಮೆಚ್ಚಿದ್ದಾರೆ: Infosys ನಾರಾಯಣಮೂರ್ತಿ

ಪವನ್​ಗೆ ಈಗಾಗಲೇ ಮೂರು ಮದುವೆಗಳಾಗಿವೆ, ಮೂರನೇ ಪತ್ನಿಗೂ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗಲು ತಯಾರಾಗಿದ್ದಾರೆ ಎಂದು ಕೆಲವು ದಿನಗಳ ಹಿಂದಷ್ಟೆ ವೈಸಿಪಿ ಪಕ್ಷದ ಮುಖಂಡರೊಬ್ಬರು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ‘ಈ ವರ್ಷದ ಜೂನ್ ವರೆಗೆ ಆ ರೀತಿಯ ಘಟನೆಗಳು ನಡೆಯುವುದಿಲ್ಲ ಆದರೆ ಜೂನ್ ತಿಂಗಳ ನಂತರ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿಗೆ ವಿಚ್ಛೇದನ ನೀಡಿ ನಾಲ್ಕನೇ ಮದುವೆ ಆಗುವ ಸಾಧ್ಯತೆ ಇದೆ’ ಎಂದಿದ್ದಾರೆ.

RELATED ARTICLES

Related Articles

TRENDING ARTICLES