Monday, February 24, 2025

ಕರಸೇವಕ ಶ್ರೀಕಾಂತ ಪೂಜಾರಿ ಜೈಲಿಂದ ಬಿಡುಗಡೆ: ಹಿಂದು ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ!

ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟ ಪ್ರಕರಣದಲ್ಲಿ 31 ವರ್ಷಗಳ ಬಳಿಕ ಜೈಲಯಪಾಲಾಗಿದ್ದ ಶ್ರೀಕಾಂತ ಪೂಜಾರಿ 9 ದಿನಗಳ ಬಳಿಕ ಇಂದು ಜೈಲಿನಿಂದ ಶನಿವಾರ ಬಿಡುಗಡೆಯಾದರು. ಹೊರಗಡೆ ಕಾದು ನಿಂತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೂಜಾರಿಯನ್ನು ಸನ್ಮಾನಿಸಿ ಶ್ರೀರಾಮನ ಭಾವಚಿತ್ರ ನೀಡಿ ಸಂಭ್ರಮಿಸಿದರು.

ರಾಮಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ದೇಶವ್ಯಾಪಿ ಸುದ್ದಿಯಾಗಿದ್ದ ಶ್ರೀಕಾಂತ್‌ ಪೂಜಾರಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಹುಬ್ಬಳ್ಳಿಯ ಸಬ್‌ ಜೈಲಿನಲ್ಲಿದ್ದ ಪೂಜಾರಿಯನ್ನು ಇಂದು ಬಿಡುಗಡೆ ಮಾಡಲಾಯಿತು.

ಶ್ರೀಕಾಂತ್‌ ಪೂಜಾರಿ ಸ್ವಾಗತಿಸಲು ಹಿಂದೂ ಕಾರ್ಯಕರ್ತರು ನೆರದಿದ್ದರು. ಪೂಜಾರಿ ಜೈಲಿನಿಂದ ಹೊರಬರುತ್ತಿದ್ದಂತೆ ಹೂಮಾಲೆ ಹಾಕಿ ಸ್ವಾಗತ ಕೋರಿದರು. ಅಲ್ಲದೇ ಶ್ರೀರಾಮನ ಭಕ್ತ ಶ್ರೀಕಾಂತ್‌ಗೆ ಶ್ರೀರಾಮಚಂದ್ರ ಹಾಗೂ ಸೀತಾಮಾತೆ ಭಾವಚಿತ್ರ ಕೊಡುಗೆಯಾಗಿ ನೀಡಿದರು. ಈ ವೇಳೆ ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಇದ್ದರು. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸದಸ್ಯರು, ಶಾಸಕರು, ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES