Saturday, January 18, 2025

ಜಪಾನ್​ ನಲ್ಲಿ ಭೂಕಂಪನ: ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಜಪಾನ್​ ನಲ್ಲಿ ಕ್ರಿಸ್ಮಸ್​ ಮತ್ತು ಹೊಸವರ್ಷದ ವೇಳೆ ಸಂಭವಿಸಿದ ಪ್ರಭಲ ಭೂಕಂಪನದಿಂದಾಗಿ ಸುಮಾರು 92 ಜನರು ಸಾವನ್ನಪ್ಪಿದ್ದರು. ಇದಕ್ಕೆ ಮರುಗಿದ ಪ್ರಧಾನಿ ನರೇಂದ್ರ ಮೋದಿ ಜಪಾನಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜಪಾನ್​ ಪ್ರಧಾನ ಮಂತ್ರಿ ಫ್ಯೂಮಿಯ ಕಿಶಿಡಾಗೆ ಪತ್ರ ಬರೆದಿದ್ದಾರೆ.

ವಿಶೇಷ ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರರಾಗಿ ಜಪಾನ್​ನೊಂದಿಗೆ ಸಂಬಂಧವನ್ನು ಭಾರತ ಗೌರವಿಸುತ್ತದೆ ಮತ್ತು ಈ ಸಮಯವನ್ನು ಸಾಧ್ಯವಿರುವ ಎಲ್ಲಾ ಸಹಾಯ ನೀಡಲು ಬದ್ಧವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಪವನ್ ಕಲ್ಯಾಣ್​​ 4ನೇ ಮದುವೆಗಲಿದ್ದಾರೆ: ಭವಿಷ್ಯ ನುಡಿದ ವೇಣು ಸ್ವಾಮಿ

ಪ್ರಾಣ ಕಳೆದುಕೊಂಡವರ ದುಃಖಿತ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ನಾವು ಜಪಾನ್​ ಮತ್ತು ವಿಪತ್ತಿನಿಂದ ಬಾಧಿತರಾದ ಅದರ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಜಪಾನ್​ ಪ್ರಧಾನ ಮಂತ್ರಿಗೆ ಪತ್ರದಲ್ಲಿ ಧೈರ್ಯ ತುಂಬಿದ್ದಾರೆ.

ಜನವರಿ 1 ರಂದು ಸಂಭವಿಸಿದ 7.5 ತೀವ್ರತೆಯ ಭೂಕಂಪವು, ಹೊನ್ಶು ಮುಖ್ಯ ದ್ವೀಪದ ಇಶಿಕಾವಾ ಪ್ರಾಂತ್ಯದಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆಗಳನ್ನು ಸೃಷ್ಟಿಸಿತು. ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹುಟ್ಟುಹಾಕಿತು. ಭೂಕಂಪದಿಂದ ಸಾವಿರಾರು ಕಟ್ಟಡಗಳು ಧ್ವಂಸಗೊಂಡಿವೆ. ವಾಜಿಮಾ ಮತ್ತು ಸುಜು ಸೇರಿದಂತೆ ಹಲವಾರು ಪಟ್ಟಣಗಳಲ್ಲಿ ಮನೆಗಳನ್ನು ನೆಲಸಮವಾಗಿವೆ.

RELATED ARTICLES

Related Articles

TRENDING ARTICLES