Wednesday, January 22, 2025

ಇಂದು ಅಂತಿಮ ಕಕ್ಷೆ ಸೇರಲಿದೆ ಆದಿತ್ಯ L1

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ.

ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್, ಆದಿತ್ಯ ಎಲ್‌1 ನೌಕೆಯು ಇಂದು ಅಂತಿಮ ಕಕ್ಷೆಯನ್ನು ಸೇರಲಿದೆ. ಸಂಜೆ 4 ಗಂಟೆ ಗೆ ಬಾಹ್ಯಾಕಾಶ ನೌಕೆಯು ಸೂರ್ಯನ ಲ್ಯಾಗ್ರೇಂಜ್‌ ಪಾಯಿಂಟ್‌ ಸೇರಲಿದ್ದು, ಅಂತಿಮ ಹಂತದ ಕಕ್ಷೆ ಬದಲಾವಣೆಯಾದರೆ ಇಸ್ರೋ ಮಹತ್ವದ ಮೈಲುಗಲ್ಲು ಮುಟ್ಟಿದಂತಾಗಲಿದೆ.

ಸೂರ್ಯನ ವಿವರವಾದ ಅಧ್ಯಯನಕ್ಕಾಗಿ ಆದಿತ್ಯ ಎಲ್ -1 ಏಳು ವಿಭಿನ್ನ ಪೇಲೋಡ್‌ಗಳನ್ನು ಹೊಂದಿದೆ. ಅವುಗಳ ಪೈಕಿ ನಾಲ್ಕು ಸೂರ್ಯನ ಬೆಳಕನ್ನು ಪರಿಶೀಲಿಸಲಿವೆ ಮತ್ತು ಇತರ ಮೂರು ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ಇನ್-ಸಿಟು ನಿಯತಾಂಕಗಳನ್ನು ಅಳೆಯಲಿವೆ.

ಈ ಉಪಕರಣಗಳು ಸೌರ ಜ್ವಾಲೆಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ಸೌರ ಚಟುವಟಿಕೆಗಳ ಡೇಟಾವನ್ನು ಒದಗಿಸಲಿವೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

 

RELATED ARTICLES

Related Articles

TRENDING ARTICLES