Sunday, December 22, 2024

ನಿಮ್ಮದೇ ಸರ್ಕಾರವಿದ್ದಾಗ ಯಾಕೆ ಕರಸೇವಕರ ಕೇಸ್‌ ವಾಪಸ್ ಪಡೆದಿಲ್ಲ?: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕರಸೇವಕರ ಮೇಲಿನ ಪ್ರಕರಣವನ್ನು ಹಿಂಪಡೆಯಲು ಯಾರೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಯಾರೂ ಕಾಳಜಿಯೂ ಮಾಡಿಲ್ಲ ಎಂದು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್  ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಬಿಜೆಪಿಯವರು ಧಾರ್ಮಿಕ ವಿಷಯಗಳ ಮೇಲೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ ಎಂದರು. ಕರಸೇವಕನ ಬಂಧನ ವಿಷಯವನ್ನು ಬಿಜೆಪಿ ರಾಜಕೀಯಕ್ಕೆ ಬಳಕೆ ಮಾಡುತ್ತಿದೆ.ಇದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕೈವಾಡ ಇದ್ದು ಲೋಕಸಭೆಗೆ ಇದರ ಲಾಭ ಪಡೆಯುವ ಹುನ್ನಾರ ಅವರದ್ದಾಗಿದೆ ಎಂದರು.

ಈ ಹಿಂದೆ ನಾನು ಮುಖ್ಯಮಂತ್ರಿ, ಶಾಸಕನಾಗಿದ್ದಾಗ ಹಿಂದೂ, ಕರಸೇವಕರ ಮೇಲಿನ ಹೋರಾಟದ ಪ್ರಕರಣಗಳನ್ನು ವಜಾಗೊಳಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ.ಅಲ್ಲದೇ 30 ವರ್ಷಗಳ ಹಳೆಯ ಹೋರಾಟದ ಪ್ರಕರಣಗಳನ್ನು ಪರಿವೀಕ್ಷಣೆ ಮಾಡಲು ತಿಳಿಸಿದ್ದೇನೆ.

ಈ ಹಿಂದೆ ಬಿಜೆಪಿ 7-8 ವರ್ಷಗಳ ಕಾಲ ಅಧಿಕಾರದಲ್ಲಿತ್ತು.ಆಗವಾಗಲೇ ಕರಸೇವಕರ ಮೇಲೆ ಅಭಿಮಾನ ಇದ್ದರೆ ಕೇಸ್’ಗಳನ್ನು ವಜಾಗೊಳಿಸಬೇಕಿತ್ತು.ಇದಕ್ಕೆ ಅವರು ಉತ್ತರ ಕೊಡಬೇಕೆಂದು ಒತ್ತಾಯಿಸಿದರು.ಶ್ರೀಕಾಂತ್ ಪೂಜಾರ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡುವ ಆರ್.ಅಶೋಕ ಹಿಂದೆ ಗೃಹ ಸಚಿವರು ಇದ್ದರು ಆಗ ಯಾಕೆ ಕೇಸ್ ಹಿಂದೆ ಪಡೆಯಲಿಲ್ಲ.

ಇದೀಗ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಇಂತಹ ವಿಷಯಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಲೋಕಸಭಾ ಚುನಾವಣೆ ಗಿಮಿಕ್ ಆಗಿದೆ ಎಂದರು.ಸದ್ಯ ಈ ಪ್ರಕರಣ ಕೋರ್ಟ’ನಲ್ಲಿದ್ದು ಬಿಜೆಪಿಯವರು ಹೋರಾಟಗಾರರ ಮೇಲೆ ಕಾಳಜಿ ಇದ್ದರೆ ಬೇಲ್ ಕೊಡಿಸುವ ಕೆಲಸ ಮಾಡಬೇಕು ಅದು ಬಿಟ್ಟು ಬೀದಿಗೆ ಇಳಿದು ಹೋರಾಟ ಮಾಡುವುದು ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

RELATED ARTICLES

Related Articles

TRENDING ARTICLES