Tuesday, November 5, 2024

ಶಾಲಾ ವಾಹನ ಚಾಲಕರಿಗೆ ಪೊಲೀಸ್​ ವೆರಿಫಿಕೇಷನ್‌ ಕಡ್ಡಾಯ!

ಬೆಂಗಳೂರು: ಶಾಲಾ ವಾಹನಗಳ ಚಾಲಕರಿಗೆ ಪೊಲೀಸ್‌ ವೆರಿಫಿಕೇಷನ್‌ ಕಡ್ಡಾಯಗೊಳಿಸಲಾಗಿದೆ. ಕಡ್ಡಾಯವಾಗಿ ವೆರಿಫಿಕೇಷನ್‌ ಮಾಡಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಈ ನಿಯಮ ಜಾರಿಗೆ ತಂದಿದೆ. ಇದಲ್ಲದೇ ವಾಹನ ಚಾಲಕರು ಮಕ್ಕಳೊಂದಿಗೆ ಅಸಭ್ಯ ವರ್ತನೆ ತೋರಿಸುತ್ತಿರುವ ಬಗ್ಗೆ ಪೋಷಕರಿಂದ ಈಗಾಗಲೇ ಇಲಾಖೆಗೆ ಸಾಲು ಸಾಲು ದೂರುಗಳು ಬಂದಿವೆ. ಈ ಹಿನ್ನೆಲೆ ಶಿಕ್ಷಣ ಇಲಾಖೆಯಿಂದ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಸಿಎಂ,ಡಿಸಿಎಂ ಇಲ್ಲದ ವೇಳೆ ಸಚಿವರ ರಹಸ್ಯ ಸಭೆ!

ನೇಮಕಕ್ಕೂ ಮೊದಲು ಎಲ್ಲಾ ಚಾಲಕರ ಮತ್ತು ಸಹಾಯಕರ ಹಿನ್ನೆಲೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ಜೊತೆಗೆ ಪ್ರತಿ ಖಾಸಗಿ ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಆದೇಶಿದ್ದು, ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗದಂತೆ ಚಾಲಕರಿಗೆ ಸೂಚನೆ ನೀಡಲಾಗಿದೆ.

RELATED ARTICLES

Related Articles

TRENDING ARTICLES