ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪದಲ್ಲಿ ತಂಗಿದ್ದಾಗ ಸ್ನಾರ್ಕೆಲಿಂಗ್ ಮಾಡಿದ್ದು ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಇದೀಗ ವೈರಲ್ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದು, ಅಲ್ಲಿ ಅವರು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ.. ಸಮುದ್ರದ ದಡದಲ್ಲಿ ಕುಳಿತು ವಿಶ್ರಾಂತಿ ಪಡೆದರು. ಅಲ್ಲದೆ, ಸಮುದ್ರದಲ್ಲಿ ಸ್ನಾರ್ಕ್ಲಿಂಗ್ ಮಾಡಿ, ಸಾಗರದಾಳದಲ್ಲಿನ ಜೀವಿಗಳನ್ನು ಕಣ್ತುಂಬಿಕೊಂಡರು.

ಈ ದ್ವೀಪಗಳು ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಶಾಂತಿಯುತ ವಾತಾವರಣದಿಂದ ನಮ್ಮನ್ನು ಮೋಡಿ ಮಾಡುತ್ತವೆ ಎಂದು ನಮೋ ಹೇಳಿಕೊಂಡಿದ್ದಾರೆ.
ಈ ಪರಿಸರವು 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಹೇಗೆ ಶ್ರಮಿಸಬೇಕು ಎಂಬುದನ್ನು ಕಲಿಸಿದೆ ಎಂದು ಮೋದಿ ಲಕ್ಷದ್ವೀಪದ ಶಾಂತಿಯುತ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದಾರೆ.

ಲಕ್ಷದ್ವೀಪದಲ್ಲಿ ತಂಗಿದ್ದಾಗ ಸ್ನಾರ್ಕೆಲಿಂಗ್ ಮಾಡಿ ಸಮುದ್ರದ ನಯನ ಮನೋಹರ ದೃಶ್ಯ
ಸ್ನಾರ್ಕೆಲಿಂಗ್ ನ ಪ್ರಕೃತಿ ಸೌಂದರ್ಯ


ಸ್ನಾರ್ಕ್ಲಿಂಗ್ ಮಾಡಿದ ನರೇಂದ್ರ ಮೋದಿ, ಸಮುದ್ರದಾಳದಲ್ಲಿನ ಜೀವಿಗಳನ್ನು ಕಂಡು ಖುಷಿಯಾದರು.
ಲಕ್ಷದ್ವೀಪದ ಸೊಬಗನ್ನು, ಅಲ್ಲಿನ ಜನರ ಆತಿಥ್ಯವನ್ನು ನೋಡಿ ಈಗಲೂ ಬೆರಗಾಗಿದ್ದಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. 