Wednesday, January 22, 2025

ವಿಕಲಚೇತನನ ಜೀವನಕ್ಕೆ ದಾರಿದೀಪವಾದ ಅಧಿಕಾರಿಗಳು!

ದೊಡ್ಡಬಳ್ಳಾಪುರ : ಜೀವನೋಪಾಯಕ್ಕಾಗಿ ಬೀದರ್​ನಿಂದ ವಲಸೇ ಬಂದ ವಿಕಲಚೇತನ ಯುವಕನಿಗೆ ಉಚಿತವಾಗಿ ತ್ರಿಚಕ್ರ ವಾಹನವನ್ನು ವಿತರಣೆ ಮಾಡಲಾಗಿದೆ.

ಕಡು ಬಡತನದಲ್ಲಿ ವಿಕಲಚೇತನನಾಗಿ ಹುಟ್ಟಿ ಜೀವನ ಸಾಗಿಸಲು ಕಷ್ಟ ಪಡಿತ್ತಿದ್ದ ಶಂಭುಲಿಂಗ (ಸುನೀಲ್​) ಕುಟುಂಬವು ಜೀವನೋಪಾಯಕ್ಕಾಗಿ ಬೀದರ್​ ಜಿಲ್ಲೆಯಿಂದ ಬೆಂಗಳೂರು ಗ್ರಾಮಾಂತ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ನೆಲೆಸಿದ್ದರು.

ಸುನೀಲ್ ವಿಕಲಚೇತನನಾದ ಕಾರಣ ಯಾವುದೇ ಉದ್ಯೋಗ ಸಿಗದೇ ಕೊನೆಗೆ ತಳ್ಳುವ ಗಾಲಿ ಚಕ್ರದ ಗಾಡಿಯಲ್ಲಿ ನೀರಿನ​ ಬಾಟಲ್ ಮಾರಾಟ ಮಾಡಿ ಬಂದ ಹಣದಲ್ಲಿ ಆ ದಿನದ ಊಟಕ್ಕೆ ಸಂಪಾದಿಸಿಳ್ಳುತ್ತಿದ್ದಾರೆ. ಇವರ ಈ ಸಾಧನೆ ಸದೃಢ ದೇಹ ಹೊಂದಿದದ್ದರು ಜನರು ಭಿಕ್ಷೆ ಬೇಡಿ ತಿನ್ನುವವವರಿಗೆ, ಸುಮ್ಮನೇ ಕಾಲಕಳೆಯುವ ಸೋಂಬೇರಿಗಳಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಚಿನ್ನದ ಕತ್ತಿ ಶ್ರೀರಾಮನಿಗೆ ಅರ್ಪಣೆ : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ಇವರ ಸ್ವಾಭಿಮಾನ ಜೀವನ ಕಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಕಲಚೇತನರು ಹಾಗು ಹಿರಿಯ ನಾಗರೀಕರ ಸಬಲೀಕರ ಇಲಾಖೆಯ ಅಧಿಕಾರಿಗಳಾದ ಎನ್​.ಎಂ ಜಗದೀಶ್​ ಅವರು, ಸುನೀಲ್​ ಜೀವನಕ್ಕೆ ಅನುಕೂಲವಾಗಲೆಂದು ತಮ್ಮ ಇಲಾಖೆ ವತಿಯಿಂದ ಸುನೀಲ್​ನ ಬೀದರ್​ ವಿಳಾಸವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ಬಳಿಕ ಉಚಿತವಾಗಿ ತ್ರಿಚಕ್ರವಾಹನವನ್ನು ವಿತರಣೆ ಮಾಡಿದ್ದಾರೆ. ಅಧಿಕಾರಿಗಳ ಈ ಸೇವೆಗೆ ಬಡ ಕುಟುಂಬ ಸಂತಸ ವ್ಯಕ್ತಪಡಿಸಿದ್ದು ಸಾರ್ವಜನಿಕರು ಮೆಚ್ಚಿಗೆ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES