Monday, December 23, 2024

Horoscope Today: ವಿವಿಧ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ಗೊತ್ತಾ ? ಇಲ್ಲಿದೆ ಮಾಹಿತಿ

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ವ್ಯವಹಾರದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ, ಅತಿಯಾದ ಕೋಪ ಸಂಕಟ.

ವೃಷಭ: ಧನ ನಷ್ಟ, ಅಪಮಾನಗಳಿಗೆ ಗುರಿಯಾಗುವಿರಿ, ಸಾಲದ ಸುಳಿಗೆ ಸಿಲುಕುವಿರಿ.

ಮಿಥುನ: ಸಾಲದ ಚಿಂತೆ, ಸಹೋದ್ಯೋಗಿಗಳಿಂದ ಸಾಲಕ್ಕೆ ಮನವಿ, ಅನಾರೋಗ್ಯ ಸಮಸ್ಯೆ.

ಕಟಕ: ಮಕ್ಕಳಿಂದ ನಷ್ಟ, ನೆರೆಹೊರೆಯವರಿಂದ ಕಿರಿಕಿರಿ, ನಿದ್ರಾಭಂಗ, ಉದ್ಯೋಗನಿಮಿತ್ತ ದೂರ ಪ್ರಯಾಣ.

ಸಿಂಹ: ಧನಾಗಮನ ಮತ್ತು ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ ಮತ್ತು ಮೋಸ.

ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ, ಸ್ನೇಹಿತರಿಂದ ತೊಂದರೆ, ದಾಂಪತ್ಯದಲ್ಲಿ ಬಿರುಕು.

ತುಲಾ: ಸಂಗಾತಿಯಿಂದ ಧನಾಗಮನ, ತಂದೆಯೊಡನೆ ಕಿರಿಕಿರಿ, ಅನಿರೀಕ್ಷಿತ ಘಟನೆಯಿಂದ ನಷ್ಟ.

ವೃಶ್ಚಿಕ: ಪ್ರಯಾಣದಿಂದ ಅನುಕೂಲ, ಆಕಸ್ಮಿಕ ಅಧಿಕ ಧನಾಗಮನ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ, ಅಧಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಧಿಕ ಒತ್ತಡ, ಸಂಶಯ, ಅನಿರೀಕ್ಷಿತ ತಪ್ಪು.

ಮಕರ: ಪಿತ್ರಾರ್ಜಿತ ಆಸ್ತಿ ಮೇಲೆ ಸಾಲ, ಮಿತ್ರರಿಂದ ಆರ್ಥಿಕ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ.

ಕುಂಭ: ಆರೋಗ್ಯದಲ್ಲಿ ಏರುಪೇರು, ಗಂಡು ಮಕ್ಕಳಿಂದ ಲಾಭ, ಶತ್ರುಗಳಿಂದ ತೊಂದರೆ, ಆಯುಷ್ಯಕ್ಕೆ ಕುತ್ತು.

ಮೀನ: ಸ್ಥಿರಾಸ್ಥಿಯಿಂದ ಧನಾಗಮನ, ಆರ್ಥಿಕ ಸಂಕಷ್ಟಗಳು ಬಗೆಹರಿಯುವುದು, ಸೇವಾವೃತ್ತಿ ಉದ್ಯೋಗ ಪ್ರಾಪ್ತಿ, ಆರೋಗ್ಯ ಸಮಸ್ಯೆಗಳು ಬಾಧಿಸುವುದು.

RELATED ARTICLES

Related Articles

TRENDING ARTICLES