Sunday, June 30, 2024

ರಾಮಲಲ್ಲಾ ಪ್ರತಿಷ್ಠಾಪನೆ ವೇಳಾಪಟ್ಟಿ ಬಿಡುಗಡೆ!

ಅಯೋಧ್ಯೆ: ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ನಡೆಯಲಿದ್ದು ರಾಮಮಂದಿರದ ಉದ್ಘಾಟನೆಗೆ ಒಂದು ವಾರ ಮುಂಚಿತವಾಗಿ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ.

ಜನವರಿ 16 ರಂದು ದೇವಾಲಯದ ಟ್ರಸ್ಟ್ ನಿಂದ ಪ್ರಾಯಶ್ಚಿತ್ತ ಸಮಾರಂಭ ನಡೆಯಲಿದೆ. ಸರಯೂ ನದಿಯ ದಡದಲ್ಲಿ ‘ದಶವಿಧ’ ತೀರ್ಥ ಸ್ನಾನ ನಡೆಯಲಿದೆ. ಇದು ವಿಷ್ಣು ಪೂಜೆ ಮತ್ತು ಗೋದಾನವನ್ನು ಒಳಗೊಂಡಿರುತ್ತದೆ. ಜನವರಿ 17 ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಭಕ್ತರು ಮಂಗಳ ಕಲಶದಲ್ಲಿ ಸರಯು ಜಲ ತುಂಬಿಸಿ ಮೆರವಣಿಯಲ್ಲಿ ಸಾಗಲಿದ್ದಾರೆ.

ಇದನ್ನೂ ಓದಿ: ಹೆಂಡ್ತಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್​ಮೇಲ್​ ಮಾಡಿದ ಪತಿರಾಯ 

ಇನ್ನು, ಜನವರಿ 18 ರಂದು ಗಣೇಶ ಅಂಬಿಕಾ ಪೂಜೆ, ವರುಣನ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ, ವಾಸ್ತು ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜನವರಿ 19 ರಂದು ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ ನಡೆಯಲಿದೆ.

ಜನವರಿ 20 ರಂದು ರಾಮಮಂದಿರದ ಗರ್ಭಗುಡಿಯನ್ನು ಸರಯುವಿನ ಪವಿತ್ರ ನೀರಿನಿಂದ ತೊಳೆಯಲಾಗುತ್ತದೆ. ಜನವರಿ 21 ರಂದು ರಾಮನ ವಿಗ್ರಹಕ್ಕೆ 125 ಕಲಶಗಳೊಂದಿಗೆ ದೈವಿಕ ಸ್ನಾನ ನೆರವೇರಲಿದೆ. ಜನವರಿ 22 ರಂದು ವಿಗ್ರಹಕ್ಕೆ ಪೂಜೆ ನೆರವೇರಲಿದೆ ಮತ್ತು ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ ಅಭಿಷೇಕ ನಡೆಯಲಿದೆ. ಶ್ರೀರಾಮಲಲ್ಲಾ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಷ್ಠಾಪಿಸಲಿದ್ದಾರೆ.

RELATED ARTICLES

Related Articles

TRENDING ARTICLES