Wednesday, January 22, 2025

ಲಕ್ಷದ್ವೀಪದ ಕಡಲ ತೀರದಲ್ಲಿ ಪ್ರಧಾನಿ ಮೋದಿ ರಿಲಾಕ್ಸ್​ ​​! ಫೋಟೊ ವೈರಲ್​

ಲಕ್ಷದ್ವೀಪ : ದ್ವೀಪ ಪ್ರದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿದ್ದು ಈ ವೇಳೆ ತಮ್ಮ ಎಕ್ಸ್​ ಖಾತೆಯಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಡಲ ತೀರಗಳಲ್ಲಿ ಮಾರ್ನಿಂಗ್ ವಾಕಿಂಗ್ ಮಾಡುತ್ತಿರುವ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಅಭಿನಯದ ಕಾಟೇರ ಚಿತ್ರದ ಪೈರಸಿ ಲಿಂಕ್​ 40 ರೂಪಾಯಿಗೆ​ ಸೇಲ್​: ಒಬ್ಬನ ಬಂಧನ!

ಪ್ರಧಾನಿ ಹಂಚಿಕೊಂಡ ಚಿತ್ರದಲ್ಲಿ, ಅವರು ಸಮುದ್ರತೀರದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ವೇಳೆ ಅವರು ಲಕ್ಷದ್ವೀಪದ ಪ್ರಕೃತಿ ಸೌಂದರ್ಯ ಮತ್ತು ಅಲ್ಲಿನ ಏಕಾಂತವನ್ನು ಕೊಂಡಾಡಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಕಪ್ಪು ಕುರ್ತಾ ಪೈಜಾಮಾ ಧರಿಸಿ ಬೀಚ್‌ನಲ್ಲಿ ಪ್ರಧಾನಿ ಮೋದಿ ನಡೆಯುತ್ತಿರುವುದು ಕಂಡುಬಂದಿದೆ.

ಸಮುದ್ರತೀರದಲ್ಲಿ ಮುಂಜಾನೆ ನಡಿಗೆ ಸಂತೋಷದಾಯಕ ಕ್ಷಣಗಳಾಗಿವೆ ಎಂದು ಅವರು ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES