Sunday, December 22, 2024

ಇಂದು ನಂಜನಗೂಡು ಬಂದ್​​​ಗೆ ಕರೆ; ಉಲ್ಟಾ ಹೊಡೆದ್ರಾ ಅರ್ಚಕರು?

ಮೈಸೂರು: ನಂಜನಗೂಡು ನಂಜುಂಡೇಶ್ವರ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಸಂಬಂಧ ಇಂದು ನಂಜನಗೂಡು ಬಂದ್‌ಗೆ ಕರೆ ನೀಡಲಾಗಿದೆ.

ನಂಜುಂಡೇಶ್ವರ ಸ್ವಾಮಿ ಉತ್ಸವ ಮೂರ್ತಿ ಮೇಲೆ ಎಂಜಲು ನೀರು ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ನಾಗರಿಕರಿಂದ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಅಂಧಕಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದಾರೆ.

ಪ್ರಕರಣವನ್ನ ನಾಜೂಕಾಗಿ ನಿಭಾಯಿಸಿದ್ದ ಪೊಲೀಸರು ಘಟನೆ ಸಂಬಂಧ ಬಾಲರಾಜು, ನಾರಾಯಣ, ಅಭಿ ನಾಗಭೂಷಣ, ನಟೇಶ್, ಅಭಿ ಎಂಬುವರ ವಿರುದ್ಧ ದೂರು ದಾಖಲಿಸಿದ್ದರು. ವಿವಾದ ಎಬ್ಬಿಸ್ತಿದ್ದಾರ ಅಂತ ಗೊತ್ತಾಗಿ ನಿನ್ನೆ ಎಡಿಸಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತು‌.

ಅರ್ಚಕರ ಸ್ಪಷ್ಟನೆ

ದೇವರ ಮೇಲೆ ಎರಚಿದ್ದು ಶುದ್ಧ ನೀರು ಎಂದು ಹೇಳಿಕೆ ನೀಡಿದ್ದ ಅರ್ಚಕರು ಉಲ್ಟಾ ಹೊಡೆದಿದ್ದಾರೆ. ನಂಜನಗೂಡು ಬಂದ್‌ಗೆ ಕರೆ ಬಗ್ಗೆ ವಿಡಿಯೋ ಹಾಗೂ ಪತ್ರಿಕಾ‌ ಪ್ರಕಟಣೆ ಬಗ್ಗೆ ಅರ್ಚಕರು ಸ್ಪಷ್ಟನೆ ನೀಡಿದ್ದಾರೆ.

ನಾವು ಸರ್ಕಾರಿ ನೌಕರರು ಅವರು ಹೇಳಿದ ಕಡೆ ಸಹಿ ಹಾಕಿದ್ದೇವೆ. ಅದನ್ನು ಬಿಟ್ಟರೆ ನಮಗೆ ಏನು ಗೊತ್ತಿಲ್ಲ. ನಂಜನಗೂಡು ಜನರಿಗೆ ಪ್ರಕರಣ ವಿಷಯ ಗೊತ್ತಿದೆ ಅವರೇ ಇತ್ಯರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ ಬಂದ್‌ಗೆ ಪರೋಕ್ಷವಾಗಿ ಬೆಂಬಲಿಸಿದ್ದಾರೆ.

ಹಿಂದೂ ಸಂಘಟನೆಗಳಿಂದ ಬಂದ್​ಗೆ ಕರೆ

ಸಭೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಭಾಗಿಯಾಗಿದ್ರು. ದೇವರಿಗೆ ಎರಚಿರುವುದು ಶುದ್ದ ನೀರೇ ಹೊರತು ಎಂಜಲು ನೀರು ಎರಚಿಲ್ಲ ಎಂದು ಹೇಳಿದ್ರು. ಎಲ್ಲವೂ ತಣ್ಣಗಾಗೋ ಹೊತ್ತಲ್ಲಿ ಇದ್ದಕ್ಕಿದ್ದಂತೆ ಹಿಂದೂ ಸಂಘಟನೆಯ ಕೆಲವರು ಇಂದು ನಂಜನಗೂಡು ಬಂದ್​ಗೆ ಕರೆಕೊಟ್ಟಿದ್ದಾರೆ.

 

 

RELATED ARTICLES

Related Articles

TRENDING ARTICLES