Wednesday, January 22, 2025

ದರ್ಶನ್​ ಅಭಿನಯದ ಕಾಟೇರ ಚಿತ್ರದ ಪೈರಸಿ ಲಿಂಕ್​ 40 ರೂಪಾಯಿಗೆ​ ಸೇಲ್​: ಒಬ್ಬನ ಬಂಧನ!

ರಾಯಚೂರು: ಡಿ ಬಾಸ್ ದರ್ಶನ್​ ನಟನೆಯ ಕಾಟೇರ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಇದೀಗ ಪೈರಸಿ ಕಾಟ ಶುರುವಾಗಿದೆ. ಚಿತ್ರದ ಪೈರಸಿ ಲಿಂಕ್​ ಮಾರಾಟ ಮಾಡುತ್ತಿದ್ದ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ. ಕಿಂಗ್​ ಪಿನ್​ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ರಾಯಚೂರಿನ ಸದರ್ ಬಜಾರ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬ ಯುವಕ 40 ರೂಪಾಯಿಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್​ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್​ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಎಲ್ಗರ್ ಔಟಾದಾಗ ಸಂಭ್ರಮಿಸದಂತೆ ಮನವಿ; ಕೊಹ್ಲಿ ನಡೆಗೆ ಅಭಿಮಾನಿಗಳು ಫಿದಾ

ಪೈರಸಿಯಿಂದಾಗಿ ನಿರ್ಮಾಪಕರಿಗೆ ಮತ್ತು ವಿತರಕರಿಗೆ ನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ವಾದಿರಾಜ ಎಂಬುವವರು ದೂರು ದಾಖಲಿಸಿದ್ದಾರೆ. ‘ವಾಟ್ಸ್ ಆಪ್’ ಮೂಲಕ ಚಾಟ್ ಮಾಡಿ 40 ರೂಪಾಯಿ ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಕಾಟೇರ’ ಸಿನಿಮಾಗೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದಾರೆ. ದರ್ಶನ್​ ಜೊತೆ ಆರಾಧನಾ, ಶ್ರುತಿ, ಕುಮಾರ್​ ಗೋವಿಂದ್​, ಜಗಪತಿ ಬಾಬು, ವಿನೋದ್​ ಆಳ್ವಾ, ವೈಜನಾಥ ಬೀರಾದರ, ಅವಿನಾಶ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

RELATED ARTICLES

Related Articles

TRENDING ARTICLES