Thursday, December 19, 2024

ಚುಡಾಯಿಸಿದ ಯುವಕನಿಗೆ ಯುವತಿ ಧರ್ಮದೇಟು!

ಆನೇಕಲ್ : ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಪೊಲೀಸರ ಸಮ್ಮುಖದಲ್ಲೇ ಯುವತಿ ಕಪಾಳ ಮೋಕ್ಷ ಮಾಡಿರುವ ಘಟನೆ ಇಂದು ಅತ್ತಿಬೆಲೆ ಸರ್ಕಲ್​ನಲ್ಲಿ ನಡೆದಿದೆ.

ದೇವನಹಳ್ಳಿ ಮೂಲದ ಯೋಗೇಶ್​ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕ, ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಆನೇಕಲ್​ ನ ಅತ್ತಿಬೆಲೆ ವೃತ್ತದಲ್ಲಿ ಬಸ್​ ಗಾಗಿ ಯುವತಿಯ ಹಾಗು ಸ್ನೇಹಿತರು ಕಾಯುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಯುವಕ, ಯುವತಿಯ ಬಳಿ ಅಸಭ್ಯವಾಗಿ ಮಾತನಾಡಿದ್ದಾನೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರು ಹಾಗು ಯುವತಿಯ ಸ್ನೇಹಿತರು ಯುವಕನನ್ನು ಹಿಡಿದು ಥಳಿಸಿದ್ದಾರೆ.

ಇದನ್ನೂ ಓದಿ: ಸರಗಳ್ಳರನ್ನು ಚೇಸ್​ ಮಾಡಿ ಹಿಡಿದ ಸಂಚಾರಿ ಪೊಲೀಸ್​: ಬಾಡಿ ಕ್ಯಾಮರಾದಲ್ಲಿ ದೃಶ್ಯ ಸೆರೆ!

ವಿಚಾರ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಯುವತಿ ಆರೋಪಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

RELATED ARTICLES

Related Articles

TRENDING ARTICLES