ಬೆಳಗಾವಿ: ಅಂಗನವಾಡಿ ಮಕ್ಕಳು ಮನೆ ಆವರಣದಲ್ಲಿದ್ದ ಗಿಡಗಳಲ್ಲಿ ಹೂವು ಕಿತ್ತಿದ್ದಕ್ಕೆ, ವಿಕೃತ ಮನೆ ಮಾಲೀಕನೊಬ್ಬ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿರುವ ದುರ್ಘಟನೆ ಬಸುರ್ಗೆ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಸಮೀಪವಿದ್ದ ಮನೆಯ ಅಂಗಳದಲ್ಲಿ ಹೂವಿನ ಗಿಡಗಳಿದ್ದವು. ಅವುಗಳಲ್ಲಿದ್ದ ಹೂವುಗಳನ್ನು ಅಂಗನವಾಡಿಯ ಮಕ್ಕಳು ಕಿತ್ತಿದ್ದಾರೆ. ಇದರಿಂದ ಕೋಪಗೊಂಡ ದುಷ್ಟ ಮನಸ್ಸಿನ ಮನೆ ಮಾಲೀಕ ಕಲ್ಯಾಣಿ ಮೋರೆ ಎಂಬಾತ ಮಕ್ಕಳನ್ನು ಹೊಡೆಯಲು ಮುಂದಾಗಿದ್ದಾನೆ. ಮಧ್ಯ ಪ್ರವೇಶಿಸಿದ ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ ಅವರು ಮಕ್ಕಳನ್ನು ಹೊಡೆಯದಂತೆ ತಡೆದಿದ್ದಾರೆ. ಇದರಿಂದ ವಿಚಲಿತನಾದ ಕಲ್ಯಾಣಿ ಮೋರೆ ಕುಡುಗೋಲಿನಿಂದ ಸುಗಂಧಾ ಮೋರೆ ಅವರ ಮೂಗನ್ನೇ ಕತ್ತರಿಸಿದ್ದಾನೆ.
ಇದನ್ನೂ ಓದಿ: Love Marriage: ಕಿರಾತಕ ಸಿನಿಮಾ ಸ್ಟೈಲ್‍ನಲ್ಲಿ ಮ್ಯಾರೇಜ್ ಆದ ಪ್ರೀಮಿಗಳು
ಸಂತ್ರಸ್ತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ. ಮೂಗು ಕತ್ತರಿಸಿದ್ದರಿಂದ ಆಕೆಯ ಶ್ವಾಸಕೋಶಕ್ಕೂ ರಸ್ತ ಹೋಗಿದೆ ಎಂದು ತಿಳಿದುಬಂದಿದೆ. ಆಕೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.