Tuesday, January 28, 2025

ಬಿ.ಕೆ. ಹರಿಪ್ರಸಾದ್​ಗೆ ಮಂಪರು ಪರೀಕ್ಷೆ ಮಾಡಿಸಬೇಕು : ಸಂಸದ ಸಂಗಣ್ಣ ಕರಡಿ

ಕೊಪ್ಪಳ : ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸಂಸದ ಸಂಗಣ್ಣ‌ ಕರಡಿ ಕುಟುಕಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಉದ್ಘಾಟನೆಗೆ ತೆರಳುವ ಕರ ಸೇವಕರಿಂದ ಮತ್ತೊಮ್ಮೆ ಗೋಧ್ರಾ ಮಾದರಿ ಗಲಭೆ ನಡೆಯಬಹುದು ಎಂಬ ಹರಿಪ್ರಸಾದ್ ಮಾತಿಗೆ ತಿರುಗೇಟು ನೀಡಿದರು.

ಹರಿಪ್ರಸಾದ್ ಅಂಥವರು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರ ಭಾವನೆ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಇಂತಹ ಹೇಳಿಕೆಗಳನ್ನು ಅಡ್ವಾನ್ಸ್ ಕೊಡುತ್ತಾರೆ ಅಂದರೆ ಇದರ ಅರ್ಥ ಏನು? ಹೀಗೆ ಹೇಳುತ್ತಾರೆ ಎಂದರೆ ಇವರದ್ದೇ ಆಂತರಿಕ ಪ್ರಚೋದನೆ ಇರಬಹುದು ಎಂದು ಆರೋಪ ಮಾಡಿದರು.‌

ಈ ಸುದ್ದಿ ಓದಿದ್ದೀರಾ? : ರಾಮನ ವಿರೋಧ ಮಾಡೋರ ತೊಡೆ ಮುರಿಯುತ್ತೇವೆ : ಶಾಸಕ ಚನ್ನಬಸಪ್ಪ 

ಇಂಥವರಿಂದಲೇ ಗಲಭೆ ಸೃಷ್ಟಿ 

ಗೋಧ್ರಾ ಮಾದರಿ ಕೃತ್ಯ ಎಸಗಲು ಕೆಲವರಿಗೆ ಹರಿಪ್ರಸಾದ್​ ಹೇಳಿಕೆ ಪ್ರಚೋದನೆ ನೀಡುತ್ತಿರಬಹುದು. ಕೆಲವು ಬಾರಿ ಇಂತಹ ಹೇಳಿಕೆಗಳಿಂದಲೇ ಹಲವರು ಪ್ರಚೋದನೆ‌ಗೆ ಒಳಗಾಗುತ್ತಾರೆ. ಯಾರ ಮನಸ್ಸಿನಲ್ಲೂ ಇಲ್ಲದಿದ್ದರೂ ಕ್ರಿಯೇಟ್ ಆಗುತ್ತದೆ. ಇದರಿಂದ ಹರಿಪ್ರಸಾದ್ ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದರು. ‌

RELATED ARTICLES

Related Articles

TRENDING ARTICLES