Wednesday, January 22, 2025

ರಾಮನ ಪೂಜೆಗೆ ಅವಕಾಶ ಕೊಟ್ಟವರು ಕಾಂಗ್ರೆಸ್: ವಿ.ಎಸ್ ಉಗ್ರಪ್ಪ

ಬೆಂಗಳೂರು: ದೇಶದಲ್ಲಿ ಇದ್ದಕಿದ್ದ ಹಾಗೇ ರಾಮ ಮಯ ಮಾಡಲಿಕ್ಕೆ ಹೊರಟಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಲಲ್ಲಾನ ಪೂಜೆಗೆ ಪ್ರಪ್ರಥಮವಾಗಿ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್​, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್​ ನವರು ಅವಕಾಶ ಕಲ್ಪಿಸಿದ್ದಾರೆ. ರಾಮ ದೇವರಾಗಿ ಎಲ್ಲಿಯು ಬಿಂಬಿಸಿಕೊಂಡಿಲ್ಲ. ನಾನು ಪ್ರತಿ ನಿತ್ಯ ರಾಮಯಾಣ ಓದುವವನು. ರಾಮ ಎಲ್ಲಿಯು ದೇವಸ್ಥಾನ ಬಯಸಿದ್ದವನಲ್ಲ. ಆದರೂ ಬಿಜೆಪಿಯವರು ದೇವಸ್ಥಾನ ಕಟ್ಟುಬೇಕು ಎಂದು ಆಂದೋಲನಗಳ ಮಾಡಿದರು.

ಇದನ್ನೂ ಓದಿ: ಚುಡಾಯಿಸಿದ ಯುವಕನಿಗೆ ಯುವತಿ ಧರ್ಮದೇಟು!

ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್​​ನಿಂದ ಆದೇಶ ಬಂದ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಿದ್ದರೇ ನಾವೇ ದೇವಾಲಯ ಕಟ್ಟುತ್ತಿದ್ದೆವು. ಇದಕ್ಕೆ ಸಂಬಂಧಿಸಿ ಅಯೋಧ್ಯೆಯಲ್ಲಿ ಟ್ರಸ್ಟ್ ಇದೆ ಅದನ್ನ ಬಿಜೆಪಿ ಮೋದಿ ಮತ್ತು ತಂಡ ಹೈಜಾಕ್ ಮಾಡಿದ್ದಾರೆ. ರಾಮನ ಆದರ್ಶಗಳನ್ನ ಪ್ರಧಾನಿ ಮೋದಿಯಾಗಲಿ ಅಥವಾ ಬಿಜೆಪಿ ಅವರು ಪಾಲಿಸಿದ್ದಾರಾ. ರಾಮನ ಹೆಸರು ಹೇಳಲಿಕ್ಕೆ ಬಿಜೆಪಿಯವರಿಗೆ ನೈತಿಕತೆ ಇದೆಯಾ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES