Wednesday, January 22, 2025

ಡೂಡ್ಲಾ ಕಾರ್ಖಾನೆ ತ್ಯಾಜ್ಯದಿಂದ ಅಂತರ್ಜಲ ಮಲೀನ: ರೈತ ಹೈರಾಣು

ಕೊಪ್ಪಳ: ತಾಲೂಕಿನ ಇಂದಿರಾನಗರದಲ್ಲಿ ಡೂಡ್ಲಾ ಹಾಲು ಕೇಂದ್ರದಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು
ಡೂಡ್ಲಾ ಕಾರ್ಖಾನೆ ತ್ಯಾಜ್ಯದಿಂದ ಸುತ್ತಲಿನ ರೈತರು ಹೈರಾಣಾಗಿದ್ದಾರೆ.

ಡೂಡ್ಲಾ ಹಾಲು ಕಾರ್ಖಾನೆ ತ್ಯಾಜ್ಯ ನೀರನ್ನು ನಿರ್ವಹಣೆ ಮಾಡದೇ ಹಾಗೇ ಬಿಡುತ್ತಿದೆ. ಈ ಹಿನ್ನೆಲೆ ಕಾರ್ಖಾನೆ ಸುತ್ತಮುತ್ತಲಿನಲ್ಲಿ ಅಂತರ್ಜಲ ಕಲುಷಿತಗೊಂಡಿದೆ. ಬೋರ್​ವೆಲ್​ನಲ್ಲಿ ಕಲುಷಿತ ನೀರು ಬರ್ತಿದ್ದು, ರೈತರು ಬೆಳೆ ಬೆಳೆಯಲಾಗದೇ ಸಂಕಷ್ಟಕ್ಕೆ ಸುಲುಕಿದ್ದಾರೆ. ಕಾರ್ಖಾನೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಇಲ್ಲದ ಕಾರಣ ತ್ಯಾಜ್ಯ ಸಂಸ್ಕರಣೆ ಮಾಡದೇ ನೇರವಾಗಿ ಭೂಮಿಯಲ್ಲಿ ಇಂಗಿಸಲಾಗ್ತಿದೆ.

ಇದನ್ನೂ ಓದಿ: ಮಕ್ಕಳು ಹೂವು ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೂಗು ಕತ್ತರಿಸಿದ ಮಾಲೀಕ

ಈ ಹಿನ್ನೆಲೆ ಭೂಮಿ ಹಾಗೂ ಅಂತರ್ಜಲ ಸಂಪೂರ್ಣ ಕಲುಷಿತವಾಗಿದೆ. ಕಾರ್ಖಾನೆಯಿಂದಾಗಿ ರೈತರ ಬದುಕು ಬೀದಿಗೆ ಬರುವ ಆತಂಕ ಎದುರಾಗಿದೆ. ದೊಡ್ಲಾ ಹಾಲು ಕಾರ್ಖಾನೆಯಿಂದ ರೈತರ ನೆಮ್ಮದಿ ಹಾಳಾಗಿದೆ. ಶೀಘ್ರವೇ ಕ್ರಮಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES