Saturday, January 11, 2025

ಬಿ.ಕೆ ಹರಿಪ್ರಸಾದ್​ ರ ಗೋಧ್ರಾ ಹತ್ಯಾಕಾಂಡ ಹೇಳಿಕೆಗೆ ಕೆ.ಎಸ್​ ಈಶ್ವರಪ್ಪ ಗರಂ!

ದಾವಣಗೆರೆ: ಗೋಧ್ರಾ ಹತ್ಯಾಕಾಂಡದ ರೀತಿ ಮತ್ತೊಂದು ದುರಂತ ಆಗಬಹುದು ಎಂಬ ಕಾಂಗ್ರೆಸ್​ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿವಾದ ಹೇಳಿಕೆ ವಿಚಾರಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಗರಂ ಆಗಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು, ಅಯೋಧ್ಯ ಭವ್ಯ ಮಂದಿರವನ್ನ ಇಡೀ ದೇಶವೇ ಒಪ್ಪಿದೆ. ಅಲ್ಲೊಂದು ಇಲ್ಲೊಂದು ಒಡಕು ಧ್ವನಿ ಬರೋದು ಸರಿಯಲ್ಲ. ಒಳ್ಳೆಯ ತಿಳುವಳಿಕೆ ಇರುವ ಹರಿಪ್ರಸಾದ್​​ರಿಂದ ಈ ಮಾತು ಬರಬಾರದಿತ್ತು. ರಾಮಭಕ್ತರಿಗೆ ಶ್ರೀ ರಾಮನಿಂದಲೇ ರಕ್ಷಣೆ ಸಿಗತ್ತದೆ. ರಾಜ್ಯ ಸರ್ಕಾರದ ರಕ್ಷಣೆ ಅವಶ್ಯಕತೆ ಇಲ್ಲ ಅನಿಸುತ್ತೆ. ರಾಮಚಂದ್ರನೇ ರಕ್ಷಣೆ ಕೊಡುತ್ತಾನೆ. ಈ ರೀತಿ ಹೇಳಿಕೆ ಕೊಡೋದು ತಪ್ಪು ಎಂದರು.

ಇದನ್ನೂ ಓದಿ: ಫೆ.29ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ!

ರಾಮ ಮಂದಿರ ಉದ್ಘಾಟನೆಯನ್ನು ಇಡೀ ದೇಶ ದೀಪಾವಳಿ ರೀತಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ 30 ವರ್ಷಗಳ ಹಿಂದೆ ರಾಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸುವ ಅವಶ್ಯಕತೆ ಏನಿತ್ತು? ಈ ರೀತಿಯ ರಾಜಕಾರಣವನ್ನು ಮಾಡಬೇಡಿ ಇದರಿಂದ ಕಾಂಗ್ರೆಸ್ ಪಕ್ಷ ರಾಮಭಕ್ತರ ಸಿಟ್ಟಿಗೆ ಕಾರಣರಾಗುತ್ತೀರಿ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES