Wednesday, January 22, 2025

ಮತ್ತೆ ಹುಳ ಬಿಟ್ಟ ಉಪ್ಪಿ.. UI ಟೀಸರ್ ಡೇಟ್ ಗೆಸ್ ಮಾಡಿ ಪಾಸ್ ಗೆಲ್ಲಿ

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ ಮಾಡ್ತಾರೆ ಅಂದ್ರೆ ಫ್ಯಾನ್ಸ್ ನಡುವೆ ದೊಡ್ಡ ಸಂಚಲನವೇ ಮೂಡುತ್ತೆ. ಸದ್ಯ ಉಪ್ಪಿ ಡೈರೆಕ್ಟ್ ಮಾಡಿರೋ UI ಸಿನಿಮಾ ರೆಡಿಯಾಗಿದ್ದು ಪ್ರಮೋಷನ್ಸ್ ಶುರುಮಾಡ್ಲಿಕ್ಕೆ ಸಜ್ಜಾಗಿದೆ. ಸದಾ ಏನಾದ್ರೂ ಡಿಫ್ರೆಂಟ್ ಆಗಿ ಮಾಡುವ ಉಪ್ಪಿ ಹೊಸ ವರ್ಷದ ಮೊದಲ ದಿನ ಒಂದು ಸವಾಲು ಹಾಕಿದ್ದಾರೆ.

ಉಪೇಂದ್ರ ಅಂದ್ರೇನೇ ಡಿಫ್ರೆಂಟ್, ಡಿಫ್ರೆಂಟ್ ಅಂದ್ರೇನೇ ಉಪ್ಪಿ. ಅದರಲ್ಲೂ ಉಪ್ಪಿ ನಿರ್ದೇಶನಕ್ಕಿಳಿದು ಬಿಟ್ರೆ ಫ್ಯಾನ್ಸ್ ತೆಲೆಗೆ ಹುಳ ಬಿಡ್ತಾನೇ ಇರ್ತಾರೆ. ಈ ಹಿಂದೆ ತಮ್ಮ ಬರ್ತ್​ಡೇಗೆ ದೃಶ್ಯಗಳೇ ಇಲ್ಲದ ಜಸ್ಟ್ ವಾಯ್ಸ್ ಇರುವ ಟೀಸರ್ ರಿಲೀಸ್ ಮಾಡಿ ಸಖತ್ ಸದ್ದು ಮಾಡಿದ್ರು.

ಈಗ ಹೊಸ ವರ್ಷದ ಮೊದಲ ದಿನವೇ ಉಪ್ಪಿ ಮತ್ತೊಂದು ನ್ಯೂಸ್ ಕೊಟ್ಟಿದ್ದಾರೆ. ಜನವರಿ 1ರಂದು ಸಂಜೆ 5ಕ್ಕೆ UI ಸಿನಿಮಾ ತಂಡ ಬಿಗ್ ಅನೌನ್ಸ್ಮೆಂಟ್ ಮಾಡೋದಾಗಿ ಘೋಷಣೆ ಮಾಡಿತ್ತು. ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಬಹುದು ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡು ಕುಳಿತಿದ್ರು. ಆದ್ರೆ, ಉಪ್ಪಿ ವಾಪಾಸ್ ಫ್ಯಾನ್ಸ್​ಗೇನೆ ಪ್ರಶ್ನೆ ಕೇಳಿದ್ದಾರೆ.

UI ಟೀಸರ್ ಲಾಂಚ್ ಯಾವಾಗ?

ತಿಂಗಳು ಮತ್ತು ವರ್ಷವನ್ನ ತೋರಿಸಿ ದಿನಾಂಕವನ್ನ ನೀವೇ ಊಹಿಸಿ ಅಂತ ಅಭಿಮಾನಿಗಳಿಗೆ ಸವಾಲ್ ಹಾಕಲಾಗಿದೆ. ಅನೇಕ ಅಭಿಮಾನಿಗಳು ಈ ಸವಾಲ್ ಸ್ವೀಕರಿಸಿ ನಾನಾ ಊಹೆ ಮಾಡ್ತಾ ಇದ್ದಾರೆ. ಈ ವಿಡಿಯೋದಲ್ಲಿ ಕುದುರೆ ಕಾಲಿನ ಶಬ್ದ 8 ಬಾರಿ ಬರುತ್ತೆ. ಮತ್ತು ಶೂ ಸಿಂಬಲ್ ಝೂಮ್ ಮಾಡಿದ್ರೆ 8 ಡಾಟ್ಸ್ ಇವೆ. ಹೀಗಾಗಿ, 8ನೇ ತಾರೀಖು ಚಿತ್ರದ ಟೀಸರ್ ಬರಲಿದೆ ಅಂತ ಫ್ಯಾನ್ಸ್ ಗೆಸ್ ಮಾಡ್ತಾ ಇದ್ದಾರೆ.

ಉಪ್ಪಿ 2 ಬಳಿಕ ಡೈರೆಕ್ಟ್ ಮಾಡಿರೋ ಚಿತ್ರ

UI ಚಿತ್ರಕ್ಕೆ ಬಂಡವಾಳ ಹೂಡಿರೋ ಕೆ.ಪಿ ಶ್ರೀಕಾಂತ್ ಮತ್ತು ಜಿ ಮನೋಹರನ್ ದೊಡ್ಡದೊಂದು ಇವೆಂಟ್​ನಲ್ಲಿ ಟೀಸರ್ ಲಾಂಚ್ ಮಾಡೋದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಸರಿಯಾದ ಡೇಟ್ ಊಹೆ ಮಾಡಿದ ಫ್ಯಾನ್ಸ್​ಗೆ ಈ ಇವೆಂಟ್​ಗೆ ಪಾಸ್ ಕೂಡ ಸಿಗಲಿದೆ.

ಉಪ್ಪಿ 2 ನಂತರ ಉಪೇಂದ್ರ ಡೈರೆಕ್ಟ್ ಮಾಡಿರೋ ಈ ಸಿನಿಮಾ ಈ ವರ್ಷದ ಬಹುನಿರೀಕ್ಷೆಯ ಸಿನಿಮಾಗಳಲ್ಲೊಂದು ಈಗಾಗ್ಲೇ ಪೋಸ್ಟ್ ಪ್ರೊಡಕ್ಷನ್​ನ ಕೊನೆ ಹಂತದಲ್ಲಿರೋ UI ಈ ಇವೆಂಟ್ ಮೂಲಕ ಪ್ರಮೋಷನ್​ಗೆ ಚಾಲನೆ ಕೊಡಲಿದೆ.

  • ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES