Thursday, December 19, 2024

ದೇವರ ವಿಗ್ರಹಗಳ ಕದ್ದು ಕಳ್ಳಸಾಗಾಟ: ವಾಹನ ಪೊಲೀಸರ ವಶಕ್ಕೆ!

ಆನೇಕಲ್ : ದೇವರ ಒಡವೆಗಳನ್ನು ಕದ್ದು ಸಾಗಿಸುತ್ತಿದ್ದ ವಾಹವನ್ನು ತಡೆದ ಪೊಲೀಸರು ವಿಗ್ರಹಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರಿನ ಅತ್ತಿಬೆಲೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ ರಾತ್ರಿ ಆನೇಕಲ್​ನ ಅತ್ತಿಬೆಲೆ ಸಮೀಪ ಗಸ್ತಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು 407 ವಾಹನವನ್ನು ಕಂಡು ಅನುಮಾನಗೊಂಡು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ವಾಹನದಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮಗನ ಸ್ನೇಹಿತನ ಜೊತೆ ಸೇರಿ ಆಟೋ ಕಳ್ಳತನ!

ವಾಹನವನ್ನು ತಪಾಸಣೆಗೊಳಪಡಿಸಿದಾಗ ದೇವರ ಕಂಚಿನ ವಿಗ್ರಹಗಳು, ಚೊಂಬುಗಳು, ತ್ರಿಶೂಲ, ಕಳಸ, ದೀಪಾಲೆ ಕಂಬಗಳು ಸೇರಿ ಅನೇಕ ವಸ್ತುಗಳು ಪತ್ತೆಯಾಗಿದ್ದು ಈ ವಸ್ತುಗಳ ಜೊತೆಗೆ ವಿಗ್ರಹಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ವಿಗ್ರಹಗಳು ತಮಿಳುನಾಡಿನ ಅಂಗಡಿಯಿಂದ ಕದ್ದು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.

ಸದ್ಯ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES