Tuesday, December 3, 2024

ಅಯೋಧ್ಯೆ ಹೋರಾಟಗಾರರಿಗೆ ಬಿಜೆಪಿ ನೈತಿಕ ಬೆಂಬಲ: ನಾಳೆ ಬಿಜೆಪಿ ತಂಡ ಹುಬ್ಬಳ್ಳಿಗೆ!

ಬೆಂಗಳೂರು: 1992ರ ಡಿ.5 ರಂದು ರಾಮ ಜನ್ಮಭೂಮಿ ಹೋರಾಟದಲ್ಲಿ ನಡೆದ ಗಲಭೆ ಸಂಬಂಧಿಸಿದ ಪ್ರಕರಣಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಮರು ಜೀವ ಕೊಟ್ಟಿದ್ದು, ಅವರನ್ನು ಬಂಧಿಸಲು ಮುಂದಾಗಿದೆ ಎಂದು ಬಿಜೆಪಿ ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರ ಬೆನ್ನಿಗೆ ಬಿಜೆಪಿ ನಿಂತಿದೆ.

ಈ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಭಟನೆ ನಡೆಸಲೂ ಬಿಜೆಪಿ ವಿಪಕ್ಷ ನಾಯಕ ಆರ್​.ಅಶೋಕ್​ ನೇತೃತ್ವದ ಬಿಜೆಪಿ ನಿಯೋಗವು ರಾಮ ಭಕ್ತರಿಗೆ ಧೈರ್ಯ ಹೇಳಲು ಮುಂದಾಗಿದೆ.

ಇದನ್ನೂ ಓದಿ: ಜ.16 ಕ್ಕೆ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮೋತ್ಸವ!

ಬುಧವಾರ ಹುಬ್ಬಳ್ಳಿಗೆ ಪ್ರವಾಸ ಕೈಗೊಳ್ಳಲಿರುವ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು, ಈ ಹಿಂದೆ (1992) ನಡೆದಿದ್ದ ಅಯೋಧ್ಯೆ ಗಲಾಟೆಯಲ್ಲಿ ಪ್ರಕರಣ ದಾಖಲಾಗಿ ಈಗ ಬಂಧನ ಭೀತಿ ಎದುರಿಸುತ್ತಿರುವವರ ಮನೆಗೆ ಭೇಟಿ ನೀಡಲಿದೆ. ಈ ವೇಳೆ ಪ್ರತಿಯೊಬ್ಬ ರಾಮಭಕ್ತರಿಗೂ ಧೈರ್ಯ ತುಂಬುವ ಕೆಲಸವನ್ನು ಬಿಜೆಪಿಯವರು ಮಾಡಲಿದ್ದಾರೆ.

RELATED ARTICLES

Related Articles

TRENDING ARTICLES