Monday, December 23, 2024

ಮಗನ ಸ್ನೇಹಿತನ ಜೊತೆ ಸೇರಿ ಆಟೋ ಕಳ್ಳತನ!

ಬೆಂಗಳೂರು: ಮಗನ ಸ್ನೇಹಿತನ ಜೊತೆ ಸೇರಿ ಕಳ್ಳತನ ಮಾಡ್ತಿದ್ದ ಆಸಾಮಿ ಸೇರಿ ಇಬ್ಬರನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ನದೀಮ್, ಜಾವೀದ್ ಬಂಧಿತ ಆರೋಪಿಗಳಾಗಿದ್ದು, ಈ ಹಿಂದೆ ಮೈಸೂರಿನಲ್ಲಿ ಆಟೋ ಡೀಲರ್ ಆಗಿದ್ದ ಜಾವೀದ್. ಸಾಲ ಮಾಡಿಕೊಂಡು ಮೈಸೂರು ಬಿಟ್ಟು ಬೆಂಗಳೂರಿಗೆ ಬಂದಿದ್ದ, ಈ ವೇಳೆ ಮಗನ ಸ್ನೇಹಿತ ಸೈಯದ್ ನದೀಮ್ ನನ್ನ ಜಾವೀದ್ ಪರಿಚಯ ಮಾಡಿಕೊಂಡಿದ್ದ, ಕಳ್ಳತನ ಮಾಡಿದರೇ ಒಳ್ಳೆ ಜೀವನ ನಡೆಸಬಹುದು ಎಂದು ನದೀಮ್​​ಗೆ ತಲೆ ಕೆಡಿಸಿದ್ದ. ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಆಟೋಗಳನ್ನ ಕಳ್ಳತನ ಮಾಡುತ್ತಿದ್ದರು. ಹೀಗೆ ಮೂರು ಆಟೋಗಳನ್ನ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಿದ್ದರು.

ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿಗಳ ಬದುಕೇ ನಮಗೆ ಆದರ್ಶ: ಸಿಎಂ ಸಿದ್ದರಾಮಯ್ಯ ಬಣ್ಣನೆ!

ಸದ್ಯ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳರನ್ನ ಬಂಧಿಸಿರುವ ಪೊಲೀಸರು.ಆರೋಪಿಗಳಿಂದ 7.50 ಲಕ್ಷ ಮೌಲ್ಯದ ಮೂರು ಆಟೋಗಳನ್ನ ವಶಕ್ಕೆ ಪಡೆದಿದ್ದಾರೆ. ಇಬ್ಬರು ಕಳ್ಳರನ್ನ ಗಿರಿನಗರ ಪೊಲೀಸರು ಜೈಲಿಗಟ್ಟಿದ್ದಾರೆ.

RELATED ARTICLES

Related Articles

TRENDING ARTICLES