ಬೆಂಗಳೂರು: ಕನ್ನಡ ನಾಮಫಲಕ ವಿಚಾರವಾಗಿ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮುಂದಿನ 15 ದಿನಗಳ ಕಾಲ, ಮಾಲ್ ಆಫ್ ಏಷ್ಯಾ ಸುತ್ತಮುತ್ತ 144ಸೆಕ್ಷನ್ ಜಾರಿ ಮಾಡಲಾಗಿದೆ.
ವಾಣಿಜ್ಯ ಮಳಿಗೆಗಳು, ಶಾಪ್‌ಗಳು ಫ್ಯಾಕ್ಟರಿಗಳು ಕಡ್ಡಾಯವಾಗಿ ನಾಮಫಲಕ ಅಳವಡಿಸಿಕೊಳ್ಳುವಂತೆ ಕರವೇ ಕಾರ್ಯಕರ್ತರು ಹೋರಾಟ ಮಾಡಿದ್ದರು. ಈ ವೇಳೆ ನಾಮಫಲಕ ಹೊಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾರಾಯಣಗೌಡ ಸೇರಿ ಹಲವು ಕನ್ನಡ ಪರ ಕಾರ್ಯಕರ್ತರ ಬಂಧಿಸಲಾಗಿದೆ.
ಇದನ್ನೂ ಓದಿ: 2024 ವರ್ಷ ಭವಿಷ್ಯ : 12 ರಾಶಿಗಳ ಫಲಾನುಫಲಗಳೇನು? ಯಾರಿಗೆ ಶುಭ? ಯಾರಿಗೆ ಅಶುಭ
ನಾರಾಯಣಗೌಡರ ಬಂಧನದಿಂದ ಮತ್ತಷ್ಟು ಉಗ್ರ ಹೋರಾಟಕ್ಕೆ ಕನ್ನಡ ಸಂಘಟನೆಗಳು ಕರೆ ಕೊಟ್ಟಿವೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಮುಂದಿನ 15 ದಿನಗಳ ಕಾಲ ಮಾಲ್ ಆಫ್ ಏಷ್ಯಾ ಸಂಪೂರ್ಣ ಕ್ಲೋಸ್ ಆಗಲಿದೆ.