ಚಿಕ್ಕಮಗಳೂರು: ಹೊಟ್ಟೆ ನೋವೆಂದು ಬಾಣಂತಿ ನರಳಾಡುತ್ತಿದ್ದರೂ ಯಾವೊಬ್ಬ ಸಿಬ್ಬಂದಿಯು ಚಿಕಿತ್ಸೆ ನೀಡಿಲ್ಲ ವೈದ್ಯರ ಈ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿದ್ದಾಳೆ.
ಹೌದು, ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಾತ್ರಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ರಂಜಿತ ಬಾಯಿ (21) ಮೃತ ದುರ್ದೈವಿ. ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ರಂಜಿತ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಶನಿವಾರ ಮಧ್ಯಾಹ್ನ ಗಂಡು ಮಗುವಿಗೆ ರಂಜಿತಾ ಜನ್ಮ ನೀಡಿದ್ದಳು.
ಆಕೆ ಹುಟ್ಟುವ ಮಗುವಿಗಾಗಿ ನೂರಾರು ಕನಸುಗಳನ್ನು ಕಂಡಿದ್ದಳು. 9 ತಿಂಗಳ ಕಾಲ ಹೊತ್ತು ಮಗುವನ್ನು ಮುದ್ದಾಡುವ ಹೊತ್ತಲ್ಲಿ ಚಿರನಿದ್ರೆಗೆ ಜಾರಿದ್ದಳು.
ರಾತ್ರಿ ಏಕಾಏಕಿ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ನರಳಿದರೂ ಯಾವೊಬ್ಬ ಸಿಬ್ಬಂದಿಯು ಚಿಕಿತ್ಸೆ ನೀಡಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿದ್ದಾಗಿ ಆರೋಪಗಳು ಕೇಳಿ ಬಂದಿದೆ. ಸಖರಾಯಟ್ಟಣ ಸಮೀಪದ ವಡೇರಹಳ್ಳಿ ತಾಂಡ್ಯದ ರಂಜಿತ ವರ್ಷದ ಹಿಂದೆ ಶಶಿಧರ್ ನಾಯಕ್ ಎಂಬವರನ್ನು ಮದುವೆಯಾಗಿದ್ದಳು. ಇದೀಗ ವೈದ್ಯರ ಕಾರಣಕ್ಕೆ ತಾಯಿ ಮೃತಪಟ್ಟಿದ್ದು ಮಗು ಅನಾಥವಾಗಿದೆ.