ಉತ್ತರಪ್ರದೇಶ: ಇಂದು ಪ್ರಧಾನಿ ನರೇಂದ್ರ ಮೋದಿ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿ ನಗರದಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.
ಮೋದಿ ಭೇಟಿ ಹಿನ್ನೆಲೆ ಇಡೀ ನಗರವನ್ನು ಹೂವುಗಳು, ಭಿತ್ತಿ ಪತ್ರಗಳಿಂದ ಸಿಂಗರಿಸಲಾಗಿದೆ. ಕಳೆದ ಎರಡು ದಿನಗಳಿಂದ ನಗರವನ್ನು ದಟ್ಟ ಮಂಜು ಆವರಿಸಿದ್ದು, ಆದರೂ ಸಿದ್ದತೆಗಳು ಭರದಿಂದ ನಡೆದಿವೆ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿ: ಪೂಜಾ ವಿಧಿ – ವಿಧಾನ ಹೀಗಿದೆ..!
ನವೀಕರಣಗೊಂಡಿರುವ ರೈಲ್ವೆ ನಿಲ್ದಾಣ ಹಾಗೂ ಹೊಸ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಕೂಡ ಮಾಡಲಿದ್ದಾರೆ.
ಮೋದಿ ಬೆಳಿಗ್ಗೆ ಸುಮಾರು 10.45ಕ್ಕೆ ಆಯೋಧ್ಯೆ ತಲುಪುವ ನಿರೀಕ್ಷೆ ಇದೆ. ಏರ್‌ಪೋರ್ಟ್‌ನಿಂದ ನೇರವಾಗಿ ನವೀಕೃತ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬಳಿಕ ನೂತನ ಏರ್‌ಪೋರ್ಟ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಾದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.