Wednesday, January 22, 2025

ಲಾಕ್​ ಆಗಿದ್ದ ಮಂತ್ರಿ ಮಾಲ್ ಓಪನ್: ಕೋರ್ಟ್ ಅನುಮತಿ!

ಬೆಂಗಳೂರು: ನಗರದ ಪ್ರತಿಷ್ಠಿತ ಮಂತ್ರಿ ಮಾಲ್ ಮತ್ತೆ ತೆರೆಯಲು ಹೈಕೋರ್ಟ್ ಅವಕಾಶ ನೀಡಿದೆ.

ತೆರಿಗೆ ಕಟ್ಟದ ಕಾರಣ ಬಿಬಿಎಂಪಿ ಮಂತ್ರಿ ಮಾಲ್​ಗೆ ಬೀಗ ಹಾಕಿತ್ತು. ಬಿಬಿಎಂಪಿಯ ಈ ನಿರ್ಧಾರವನ್ನು ಪ್ರಶ್ನಿಸಿ ಮಾಂತ್ರಿ ಮಾಲ್ ಆಡಳಿತ ಮಂಡಳಿ ಕೋರ್ಟ್​ನಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಅನ್ವಯ ಮತ್ತೆ ಮಂತ್ರಿ ಮಾಲ್ ತೆರೆಯಲು ಬಿಬಿಎಂಪಿ ಅವಕಾಶ ನೀಡಿದೆ.

ಇದನ್ನೂ ಓದಿ: ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ!

ಇದರೊಂದಿಗೆ ಬಿಬಿಎಂಪಿಗೆ ಹಿನ್ನಡೆಯಾಗಿದೆ. 2019-20ರವರೆಗಿನ ಒಟ್ಟು 51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಂತ್ರಿ ಸ್ಕ್ವೇರ್ ಮಾಲ್​ಗೆ ಬಿಬಿಎಂಪಿ ಬೀಗ ಜಡಿದಿತ್ತು. ಖುದ್ದು ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್​ ಡಿಸೆಂಬರ್ 27ರಂದು ಮಂತ್ರಿ ಮಾಲ್​ಗೆ ತೆರಳಿ ಪ್ರಮುಖ ದ್ವಾರವನ್ನು ಲಾಕ್ ಮಾಡಿದ್ದರು.

RELATED ARTICLES

Related Articles

TRENDING ARTICLES