Tuesday, November 5, 2024

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಸರ್ಕಾರ ಕಾಣಿಕೆ ಮೇಲೆ ಕಾಣಿಕೆ ಕೊಡ್ತಿದೆ: ಆರ್​. ಅಶೋಕ್  

ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ಕೊಡುತ್ತಿದೆ ಎಂದು ಆರ್​. ಅಶೋಕ್ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ, ಅವರಿಗೆ ಮಾತ್ರ ಪರಿಹಾರ ನೀಡಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಸಿದ್ದರಾಮಯ್ಯ ಅವರು ಕಣ್ಣು ಕಾಣದ ರೀತಿ ಅಲ್ಪಸಂಖ್ಯಾತರಿಗೆ ಬಂಪರ್ ಮೇಲೆ ಬಂಪರ್ ಕೊಡುಗೆ ನೀಡುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗೋದೇ 5000 ಕೋಟಿ ರೂ. ಅದರಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಹಿಂದೂಗಳು ಹಾಗೂ ದಲಿತರೇನು ಮಾಡಬೇಕು? ಲೋಕ ಸಭಾ ಚುನಾವಣೆಗೆ ಓಲೈಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ: ಸಿಎಂ ಸಿದ್ದರಾಮಯ್ಯ

ಟಿಪ್ಪು ಸಂಸ್ಕೃತಿ ಹೇರುವ ಕೆಲಸ 

ಟಿಪ್ಪು ಸಂಸ್ಕೃತಿ ಹೇರುವ ಕೆಲಸ ಸಿಎಂ ಮಾಡುತ್ತಿದ್ದಾರೆ. ಒಂದೇ ಒಂದು ಅಭಿವೃದ್ಧಿಗೆ ಕಲ್ಲು ಹಾಕಿಲ್ಲ ಎಂದು ಕಾಂಗ್ರೆಸ್‍ನ ಬಿ.ಆರ್ ಪಾಟೀಲ್ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಮಾತ್ರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂಗಳು ವಾಸ ಮಾಡುವ ಜಾಗದಲ್ಲಿ ಅಭಿವೃದ್ಧಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಓಲೈಕೆ ರಾಜಜೀಯ ಮಾಡುತ್ತಿದ್ಧಾರೆ

ಪಿಎಫ್‍ಐ ಮೇಲಿನ ಕೇಸ್ ವಾಪಸ್ ಪಡೆದ್ರು, ಕೆ.ಜಿ ಹಳ್ಳಿ, ಡಿಜೆ ಹಳ್ಳಿ ಘಟನೆಯ ಕೇಸ್ ವಾಪಸ್ ಪಡೆಯುವಂತೆ ಮೈಸೂರು ಶಾಸಕ ಪತ್ರ ಬರೆದು ವಾಪಸ್ ಪಡೆಯಲು ಶಿಫಾರಸ್ಸು ಮಾಡುತ್ತಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ನಮ್ಮ ಬ್ರದರ್ಸ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈ ನಡುವೆ ಸಿದ್ದರಾಮಯ್ಯ ಪ್ರಮಾಣವಚನ ಪಡೆಯುವಾಗ ಎಲ್ಲಾ ಧರ್ಮ ಸಮಾನವಾಗಿ ಕಾಣುತ್ತೇನೆ ಎಂದಿದ್ದರು. ಈಗ ಅವರು ಓಲೈಕೆ ಮಾಡುತ್ತಿದ್ದಾರೆ ಎಂದರು

ರೈತರಿಗೆ ಬರ ಪರಿಹಾರ ಕೊಡಬೇಕು.

ಬೆಳಗಾವಿ ಅಧಿವೇಶನದಲ್ಲಿ ಎರಡು ಸಾವಿರ ಘೋಷಣೆ ಮಾಡಿದ್ರೂ, ಒಂದು ವಾರದಲ್ಲಿ ಎರಡು ಸಾವಿರ ಕೊಡುತ್ತೇನೆ ಎಂದಿದ್ದರು. ಅಧಿವೇಶನ ಮುಗಿದು ಇಷ್ಟು ದಿನ ಆಯ್ತು, ಇನ್ನೂ ಕೊಟ್ಟಿಲ್ಲ. ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ಇವರು ಓಲೈಕೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES