Sunday, January 19, 2025

ಯಡಿಯೂರಪ್ಪ ನನ್ನ ಅಧ್ಯಕ್ಷ ಮಾಡಿಲ್ಲ : ವಿಜಯೇಂದ್ರ

ವಿಜಯಪುರ : ನನ್ನನ್ನು ಬಿ.ಎಸ್. ಯಡಿಯೂರಪ್ಪನವರು ಅಧ್ಯಕ್ಷನನ್ನಾಗಿ ಮಾಡಿಲ್ಲ. ಪ್ರಧಾನಿ ನರೇಂದ್ರ ಮೊದಿ, ಜೆ.ಪಿ. ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರು ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಯಡಿಯೂರಪ್ಪ ವಿರುದ್ಧ ಶಾಸಕ ಯತ್ನಾಳ್ ಆರೋಪ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರ ಆರೋಪದಲ್ಲಿ ಸತ್ಯಾಂಶ ಇದ್ರೆ ಪ್ರತಿಕ್ರಿಯೆ ಬರುತ್ತದೆ. ಹುಡುಗಾಟಿಕೆ ಹೇಳಿಕೆ‌ ಇದ್ರೆ ಬರಲ್ಲ ಎಂದು ಟಾಂಗ್ ಕೊಟ್ಟರು.

ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಮೇಲೆ ಎಲ್ಲರೂ ಸಹಕಾರ, ಆಶೀರ್ವಾದ ಮಾಡಿದ್ದಾರೆ. ನಾನು‌ ರಾಜ್ಯಾಧ್ಯಕ್ಷನಾಗಿ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಭೇಟಿ ಕೊಟ್ಟಿದ್ದೇನೆ. ಹೊಸ ವರ್ಷದ ಹೊಸ್ತಿಲಲ್ಲಿ ನಾವು ಇದ್ದೇವೆ. ಎಲ್ಲ ಹಳೆ ವಿಚಾರಗಳನ್ನು ಬದಿಗಿಟ್ಟು ಎಲ್ಲರ ವಿಶ್ವಾಸ ತೆಗೆದುಕೊಂಡು ನಾನು ಮುನ್ನಡೆಯುತ್ತೇನೆ ಎಂದು ಹೇಳಿದರು.

ಆರೋಪ ಮಾಡಿದವರು ದಾಖಲೆ‌ ಕೊಡಲಿ

ನಾನು ಇಟ್ಟ ಗುರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಲೋಕಸಭಾ ಚುನಾವಣೆ ಗೆಲ್ಲಬೇಕು, ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ನಾನಾನಗಲಿ, ಯಾರಾಗಲಿ ಕೇಂದ್ರಕ್ಕೆ ಹೋಗಿ ಚಾಡಿ ಹೇಳುವ ಕೆಲಸ ಮಾಡಿಲ್ಲ. ಆರೋಪಕ್ಕೆ ಗಂಭೀರತೆ ಇದ್ರೆ ಉತ್ತರ ಕೊಡಬಹುದು. ಯಡಿಯೂರಪ್ಪರ ಮೇಲೆ ಯಾವುದೇ ಅನುಕಂಪ ತೋರಿಸುವ ಅಗತ್ಯವಿಲ್ಲ. ಆರೋಪ ಮಾಡಿದವರು ದಾಖಲೆ‌ ಇದ್ರೆ ಸರ್ಕಾರಕ್ಕೆ ಕೊಡಲಿ, ಮುಂದಿನ ನಿರ್ಧಾರ ಮಾಡುತ್ತದೆ ಎಂದು ಕುಟುಕಿದರು.

RELATED ARTICLES

Related Articles

TRENDING ARTICLES