Wednesday, January 22, 2025

ರಾಮನ ವಿಗ್ರಹ ಪ್ರತಿಷ್ಠಾಪನೆಗೆ 84 ಸೆಕೆಂಡ್​ಗಳ ಶುಭಸಮಯ ನಿಗದಿ!

ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆಗೆ ಇನ್ನು 23 ದಿನವಷ್ಟೇ ಬಾಕಿ. ಆಯೋಧ್ಯೆಗೆ ಅಯೋಧ್ಯೆಯೇ ಶ್ರೀರಾಮನನ್ನು ಬರ ಮಾಡಿಕೊಳ್ಳಲು ಸಜ್ಜಾಗುತ್ತಿದೆ.

ರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಸಮಯವೂ ನಿಗದಿಯಾಗಿದೆ. 84 ಸೆಕೆಂಡ್‌ ಅವಧಿಯ ಶುಭ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾ ಕಾರ್ಯ ಸಂಪನ್ನಗೊಳ್ಳಲಿದೆ. ಜನವರಿ 22ರ ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್‌ನಿಂದ 12 ಗಂಟೆ 30 ನಿಮಿಷ 32 ಸೆಕೆಂಡ್‌ ನಡುವಿನ 84 ಸೆಕೆಂಡ್‌ಗಳ ಅವಧಿಯನ್ನು ಪ್ರಾಣಪತ್ರಿಷ್ಠಾಪನೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ!

ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನೆ ಮುಹೂರ್ತಕ್ಕೆ ಸಮಯ ಸೂಚಿಸುವಂತೆ ದೇಶಾದ್ಯಂತ ಇರುವ ವಿದ್ವಾಂಸರು ಹಾಗೂ ಪ್ರಖ್ಯಾತ ಜ್ಯೋತಿಷಿಗಳಲ್ಲಿ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಮನವಿ ಮಾಡಿತ್ತು. ಎಲ್ಲರಿಂದ ಬಂದ ಮಾಹಿತಿಯನ್ನು ಸಮನ್ವಯಗೊಳಿಸಿ ಕೊನೆಗೆ ಮುಹೂರ್ತ ಸಮಯ ಅಂತಿಮಗೊಳಿಸಲಾಗಿದೆ.

RELATED ARTICLES

Related Articles

TRENDING ARTICLES