Monday, December 23, 2024

ದೇಶಭಕ್ತಿ ಮೂಡಿಸಲು ಸೇವಾದಳ ಪೂರಕ: ಜಿ.ಲಕ್ಷ್ಮೀಪತಿ

ದೊಡ್ಡಬಳ್ಳಾಪುರ: ಭಾರತ ಸೇವಾದಳ ಸ್ಥಾಪನೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಶಾಲೆಗೊಂದು ಸೇವಾದಳ ಶಾಖೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಲಕ್ಷ್ಮೀಪತಿ ಹೇಳಿದರು.

ಭಾರತ ಸೇವಾದಳದ ಜಿಲ್ಲಾ ಸಮಿತಿ ವತಿಯಿಂದ ನಗರದ ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯಲ್ಲಿ ನಡೆದ ಭಾರತ ಸೇವಾದಳದ ಶತಮಾನೋತ್ಸವ ಸ್ಮರಣೆ ಮತ್ತು ಸಂಸ್ಥಾಪನಾ ದಿನಾಚರಣೆ -ಅಂಗವಾಗಿ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಭಾವೈಕ್ಯ ಮಕ್ಕಳ ಮೇಳದಲ್ಲಿ ಮಾತನಾಡಿದರು.

ಇದನ್ನೂ ಓದಿ: ಅಂದು ಸಾರಥಿ.. ಇಂದು ಕಾಟೇರ.. ದರ್ಶನ್​ ಗೆ ಟ್ವಿಸ್ಟ್​: ಪವರ್​ ರೇಟಿಂಗ್-4/5

ದೇಶ ಸೇವೆಗಾಗಿ ಹುಟ್ಟಿಕೊಂಡಿರುವ ಸೇವಾದಳ ಶಿಸ್ತು, ದೇಶಭಕ್ತಿ, ಸೇವಾ ಮನೋಭಾವ ಮೂಡಿಸಲು ಸಹಕಾರಿಯಾಗಿದೆ. ರಾಷ್ಟ್ರಗೀತೆ, ರಾಷ್ಟ್ರಧ್ವಜ ಸೇರಿದಂತೆ ರಾಷ್ಟ್ರೀಯ ಐಕ್ಯತೆ ಬೆಳಸುವಲ್ಲಿ ಸೇವಾದಳ ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಮಾಡುತ್ತಲೇ ಇದೆ. ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ ನಿಸ್ವಾರ್ಥ ಸೇವೆಯಂತಹ ಉದಾತ್ತ ಗುಣಗಳನ್ನು ಮೂಡಿಸುತ್ತಿರುವ ಭಾರತ ಸೇವಾದಳ ಕಾರ್ಯ ಶ್ಲಾಘನೀಯ ಎಂದರು.

ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ರಾಮಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಕೊಂಗಾಡಿಯಪ್ಪ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಪ್ರಕಾಶ್, ಉಪಾಧ್ಯಕ್ಷ ಎಸ್. ಪ್ರಕಾಶ್, ನಿರ್ದೇಶಕ ರಮೇಶ್ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಆನಂದಮೂರ್ತಿ, ಭಾರತ ಸೇವಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ಸಂಚಾಲಕ ರಾಜು, ಶಾಖಾ ನಾಯಕ ಎಸ್.ಬೋರಪ್ಪ, ಜಿಲ್ಲಾ ನಿರ್ದೇಶಕ ಕೆಂಪೇಗೌಡ, ಬೊಮ್ಮಕ್ಕ, ಟಿ.ಕೆ.ಸಾವಿತ್ರಮ್ಮ, ಎಂ.ಮುನಿರಾಜು, ಎಸ್.ಪಿ.ವೆಂಕಟಾಚಲಯ್ಯ, ಪರಮೇಶ್ವರಯ್ಯ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹಮಾಮ್ ವೆಂಕಟೇಶ್, ನಿರ್ದೇಶಕ ಜ್ಯೋತಿಕುಮಾ‌ರ್ ಇದ್ದರು.

RELATED ARTICLES

Related Articles

TRENDING ARTICLES