ಬೆಂಗಳೂರು: ನಾಳೆ ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿ. ಸಂಕಷ್ಟ ನಿರ್ವಾರಕ ಮಾರ್ಗಶಿರ ಮಾಸದಲ್ಲಿ ಏಕೆ ಆಚರಣೆ ಮಾಡುತ್ತಾರೆ.ಪೂಜಾ ವಿಧಿ-ವಿಧಾನಗಳೇನು ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ
ಹೌದು, ಗಣೇಶನಿಗೆ ಪೂಜೆಗಳಲ್ಲಿ ಅಗ್ರಸ್ಥಾನ. ಗಣೇಶನನ್ನು ಬುದ್ಧಿವಂತಿಕೆ ಮತ್ತು ಅದೃಷ್ಟದ ದೇವರು ಎಂದು ಪೂಜಿಸಲಾಗುತ್ತದೆ. ಸಂಕಷ್ಟಿ ಎಂದರೆ ಕಷ್ಟಗಳಿಂದ ಮುಕ್ತಿ.ಇಂತಹ ಕಷ್ಟಗಳಿಂದ ನಿವಾರಣೆ ಪಡೆಯುವದಕ್ಕೆ ಪ್ರತಿ ತಿಂಗಳು ಸಂಕಷ್ಟ ಚತುರ್ಥಿ ಆಚರಣೆ ಮಾಡಲಾಗುವುದು. ಈ ವ್ರತ ಅನುಸರಿಸುವುದರಿಂದ ಗಣೇಶನು ಭಕ್ತರ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.
ಸಕಲ ಶಾಪ ಪರಿಹಾರಕ ಅಖುರಥ ಮಹಾಗಣಪತಿ ಪೂಜಾ ವಿಧಾನ
ನಾಳೆ ಗಣೇಶನ ಪೂಜೆಯನ್ನು 30-12-2023 ರ ಸಂಜೆ 05:28 ರಿಂದ ರಾತ್ರಿ 07:58 ರೊಳಗೆ ಪೂಜೆಯನ್ನು ಮಾಡಬೇಕು, ದುರ್ಗಾಪೀಠದಲ್ಲಿ ಸ್ಥಾಪಿಸಬೇಕು. ನೈವೇದ್ಯಕ್ಕೆ ಕಡುಬು, ಆಂಬೋಡೆ, ಪಂಚಕಜ್ಜಾಯ, ಮೋದಕವನ್ನು ಮಾಡಿ ಅರ್ಪಿಸಬೇಕು. ನಾಳೆ “ಓಂ ಆಖುರಥ ಮಹಾಗಣಪತಯೇ ನಮಃ” ಎಂದು 1008 ಬಾರಿ ಜಪಿಸಬೇಕು.
50 ಶನಿವಾರದಂದು ಸಂಕಷ್ಟಹರ ಚತುರ್ಥಿ ಬಂದಿರುವುದರಿಂದ ಜನ್ಮಶನಿ, ಅಷ್ಟಮ ಶನಿ, ಸಾಡೇಸಾತ್ ಶನಿದೇವರ ತೊಂದರೆ, ರಾಹು ದೆಶೆ ಮತ್ತು ಜಾತಕದಲ್ಲಿ ಮಂಗಳ-ಕೇತು ಸಂಯೋಗ ಇರುವವರಿಗೆ ಈ ಆಖುರಥ ಮಹಾಗಣಪತಿಯ ಆರಾಧನೆಯನ್ನು ಮಾಡುವುದರಿಂದ ದೋಷಗಳು ಪರಿಹಾರವಾಗುತ್ತದೆ.
ಈ ಮಂಡಲವನ್ನು ಹಾಕಿ ಆಖುರಥ ಮಹಾಗಣಪತಿಯನ್ನು ಆರಾಧಿಸಿ
ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿಯ ಫಲಾಫಲಗಳು
- ಕನ್ಯಾದಲ್ಲಿ ಕೇತು ಮತ್ತು ಲಗ್ನದಲ್ಲಿ ರವಿ ಮಂಗಳ ಯೋಗ ಇರುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತದೆ.
- ಜಾಗತಿಕವಾಗಿ ಅನಾಹುತಗಳು ಹೆಚ್ಚಾಗುತ್ತವೆ.
- ಸರಣಿ ಅಪಘಾತಗಳು ಬೆಂಗಳೂರು, ಉತ್ತರ ಭಾರತ ಮತ್ತು ಹೆಚ್ಚಾಗುತ್ತವೆ
- ದೆಹಲಿಯಲ್ಲಿ ಮಠ ಶ್ರೀಯುತ ಎಸ್.ಟಿ.ಸೋಮಶೇಖರ್ ರವರಿಗೆ ನಿಮ್ಮ ಕ್ಷೇತ್ರದ ಜನತೆಯ ಸೇವೆಯನ್ನು ಮಾಡಿ ಇಲ್ಲವಾದರೆ ಮುಂದಿನ ದಿನದಲ್ಲಿ ಹಿನ್ನೆಡೆಯುಂಟಾಗಬಹುದು.
- ಜನಪ್ರಿಯ ಶಾಸಕರಾದ ಶ್ರೀಯುತ ಹೆಚ್.ಡಿ.ರೇವಣ್ಣನವರೇ ಆದಷ್ಟು ನೀವು ರಾಜಮಾತಂಗಿ ದೇವಿಯ ಆರಾಧನೆಯನ್ನು ಮಾಡುವುದು ಒಳಿತು. ನಿಮ್ಮ ಕುಟುಂಬದ ಮೇಲೆ ದುಷ್ಟಜನರ ಕಣ್ಣು ಬಿದ್ದಿದೆ, ನಿಮಗೆ ಶುಭವಾಗಲೆಂದು ಶುಭಾಶೀಗ್ವಾದವನ್ನು ಮಾಡುತ್ತಿದ್ದೇವೆ. ಮೇ ನಂತರ ನಿಮಗೆ ಉತ್ತಮ ಸ್ಥಾನಸಿಗಲಿದೆ.
- ಶ್ರೀಮತಿ ಭವಾನಿ ರೇವಣ್ಣನವರೇ ಜಾತಕದ ಪ್ರಕಾರ ಮುಂಬರುವ ಏಪ್ರಿಲ್ ನಂತರ ಅದ್ಭುತ ಸ್ಥಾನಮಾನ ನಿಮ್ಮ ಕೀರ್ತಿ ಮತ್ತು ಯಶಸ್ಸಿಗೆ ಸಿಗಲಿದೆ.
- ಶ್ರೀಯುತ ಎಂ.ಕೃಷ್ಣಪ್ಪ ನವರೇ ಹಾಗೂ ಪ್ರಿಯಕೃಷ್ಣರವರೇ ನಿಮಗೆ ಉತ್ತಮ ಸಮಯ ಫೆಬ್ರವರಿ ನಂತರ ಬರಲಿದೆ ಆದರೂ ಬಹಳ ಎಚ್ಚರದಿಂದಿರುವುದು ಅವಶ್ಯಕ, ಏಕೆಂದರೆ ನಿಮಗೆ ಹಿತಶತ್ರುಗಳು ಹೆಚ್ಚಾಗಲಿದ್ದಾರೆ ಎಚ್ಚರ.
- ಮಾನ್ಯ ಶಿಕ್ಷಣ ಸಚಿವರಾದ ಶ್ರೀಯುತ ಮಧುಬಂಗಾರಪ್ಪನವರೇ ನೀವು ಶ್ರೀ ಶಿಕ್ಷಣದಲ್ಲಿ ಬದಲಾವಣೆಯನ್ನು ತಂದಿರುವುದು ನಮಗೆ ಶ್ಲಾಘನೀಯವಾಗಿದೆ ಆದರೆ ನಮ್ಮ ಹೆಮ್ಮೆಯ ಭಾರತದ ನಿಜವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವಂತಹ ವಿಷಯವನ್ನು ಶಿಕ್ಷಣದಲ್ಲಿ ಅಳವಡಿಸಿ ಬಾಲ್ಯದಿಂದಲೇ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ. ನಿಮ್ಮ ತಂದೆಯಾದ, ನಮ್ಮ ಹೆಮ್ಮೆಯ ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿ॥ ಶ್ರೀಯುತ ಬಂಗಾರಪ್ಪನವರು ಕಾವೇರಿ ಗಾಗಿ ತಮ್ಮ ಅಧಿಕಾರವನ್ನೇ ತ್ಯಜಿಸಿದ ಮಹಾನ್ ರಾಜಕಾರಣಿ, ಅಂತಹ ತ್ಯಾಗಮಯಿಯನ್ನು ನಾವಿಂದಿಗೂ ನೆನೆಸುತ್ತೇವೆ, ಆದ್ದರಿಂದ ನೀವು ಶಿಕ್ಷಣದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ವಿಷಯವನ್ನಳವಡಿಸುವುದು ಸೂಕ್ತ.
- ಜಗತ್ತಿಗೆ ಶಾಂತಿ ಮಂತ್ರವನ್ನು ಬೋಧಿಸಿ ಜೀವನದ ಕಲೆಯನ್ನು ಸರ್ವರಿಗೂ ತಿಳಿಸಿ ಸನ್ಮಾರ್ಗವನ್ನು ಬೋಧಿಸುತ್ತಿರುವ ಮಹಾಗುರುಗಳಾದ ಡಾ॥ ರವಿಶಂಕರ್ ಗುರೂಜಿ ಯವರೇ ಶತ್ರುಗಳು ನಿಮ್ಮ ಹೆಸರಿಗೆ ಮಸಿಬಳಿಯುವ ಕೆಲಸದಲ್ಲಿ ತೊಡಗಿದ್ದಾರೆ. ದಯವಿಟ್ಟು ಎಚ್ಚೆತ್ತುಕೊಂಡರೆ ಅದರಿಂದ ಪಾರಾಗಬಹುದು.
- ಶ್ರೀಯುತ ಬಸನಗೌಡ ಪಾಟೀಲ್ ಯತ್ನಾಳ್ ರವರೇ ಸದಾ ಹಿಂದೂ ಪರ ಘರ್ಜಿಸುತ್ತಿರುವ ದಿಟ್ಟ ರಾಜಕಾರಣಿಯಾದ ನೀವು ಫೆಬ್ರವರಿ
- 2024 ರ ನಂತರ ಎಚ್ಚರವಾಗಿರುವುದು ಸೂಕ್ತ. 2024 ರಲ್ಲಿ ಪ್ರಸಿದ್ಧ ಜಗದ್ಗುರುಗಳು, ಧಾರ್ಮಿಕ ಗುರುಗಳು, ಪೀಠಾಧಿಪತಿಗಳು ಕಣ್ಮರೆಯಾಗುವ ಸಾಧ್ಯತೆ ಹೆಚ್ಚಾಗಿದೆ, ಆದ್ದರಿಂದ ನಿಮ್ಮ ಕ್ರೀ ಆರೋಗ್ಯದ ಕಡೆ ಮತ್ತು ಪ್ರಯಾಣದ ಕಡೆ ಎಚ್ಚರ ವಹಿಸಿ.
- ಸಿಂಹ ರಾಶಿಯ ಯುವ ಪೀಳಿಗೆಯವರು ಹೊಸ ಉದ್ಯೋಗವನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ಸಮಯವನ್ನು ವ್ಯರ್ಥಮಾಡದೇ ಪ್ರಯತ್ನವನ್ನು ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ.
- ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಶ್ರೀಯುತ ಚಂದ್ರಬಾಬುನಾಯ್ಡು ರವರೇ ನಿಮ್ಮ ಆರೋಗ್ಯದ ಕಡೆ ಎಚ್ಚರವಹಿಸಿ, ಹೃದಯ ಸಂಬಂಧ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದ್ದಾರೆ.