ಖತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತ ಮೂಲದ ಎಂಟು ಮಂದಿ ನಿವೃತ್ತ ನೌಕಾಪಡೆ ಅಧಿಕಾರಿಗಳಿಗೆ ಕ್ಷಮಾದಾನ ದೊರೆತಿದೆ.
ಭಾರತ ಸರ್ಕಾರ ಮತ್ತು ಆಪಾದಿತರ ಕುಟುಂಬಸ್ಥರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಖತಾರ್ ನ್ಯಾಯಾಲಯವು ಮರಣದಂಡನೆಯನ್ನು ಜೈಲು ಶಿಕ್ಷೆಗೆ ಪರಿವರ್ತಿಸಿ ಆದೇಶಿಸಿದೆ. ನ್ಯಾಯಾಲಯದ ತೀರ್ಪಿನ ಪ್ರತಿಗಾಗಿ ಕಾಯಲಾಗುತ್ತಿದ್ದು, ಬಳಿಕ ಎಂಟೂ ಮಂದಿಯನ್ನು ಭಾರತಕ್ಕೆ ಕರೆತರುವ ಸಂಬಂಧ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗರು ಶ್ರೀರಾಮನನ್ನು ಅಪಹರಿಸಿಬಿಟ್ಟಿದ್ದಾರೆ : ಸಂಜಯ್ ರಾವತ್
ಎಂಟೂ ಮಂದಿ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಖತಾರ್ ನ ಖಾಸಗಿ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಣಕಾಸು ಅವ್ಯವಹಾರ ಪ್ರಕರಣವೊಂದರಲ್ಲಿ ಸಿಲುಕಿದ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಖತಾರ್ ನ ಉನ್ನತ ನ್ಯಾಯಾಲಯವು ಎಂಟು ಮಂದಿಗೂ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಸಂಬಂಧ ಖತಾರ್ ನ ರಾಜಕುಮಾರ ಸಲ್ಮಾನ್ ಬಿನ್ ಮೊಹಮದ್ ಅವರಿಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಈ ಪ್ರಕರಣದ ಬಗ್ಗೆ ಗಮನ ಹರಿಸುವಂತೆ ಮನವಿ ಮಾಡಿದ್ದರು.