ರಷ್ಯಾ ಜತೆ ಕಳೆದ ಎರಡು ವರ್ಷಗಳಿಂದ ನಿರಂತರ ಯುದ್ದಲ್ಲಿ ತೊಡಗಿರುವ ಉಕ್ರೇನ್ ಗೆ ಅಮೆರಿಕ, ಕೊಟ್ಟ ಮಾತಿನಂತೆ ನೆರವಿನ ಹಸ್ತ ಚಾಚಿದೆ.
ಇಂದು ಉಕ್ರೇನ್ ನೆರವಿನ ಕೊನೆಯ ಕಂತು, 2500 ಕೋಟಿ ಡಾಲರ್ ಹಣವನ್ನು ಅಮೆರಿಕ ಸರ್ಕಾರ ಬಿಡುಗಡೆ ಮಾಡಿದೆ. ನಿರಂತರ ಯುದ್ದದಿಂದ ಸಂಪೂರ್ಣ ಜರ್ಜರಿತವಾಗಿರುವ ಉಕ್ರೇನ್, ದೇಶವನ್ನು ಪುನರ್ ನಿರ್ಮಾಣ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ನೆರವು ಕೋರಿದೆ. ಉಕ್ರೇನ್ -ರಷ್ಯಾ ಯುದ್ದ ಆರಂಭವಾದ ದಿನದಿಂದಲೂ ಅಮೇರಿಕಾ, ಉಕ್ರೇನ್ ಬೆಂಬಲಕ್ಕೆ ನಿಂತಿದ್ದು, ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವು ಒದಗಿಸುತ್ತಿದೆ. ಈ ವರೆಗೆ ಅಮೆರಿಕ ಸಂಸತ್ತು ಮಂಜೂರು ಮಾಡಿದ್ದ ಸಾವಿರಾರು ಕೋಟಿ ಡಾಲರ್ ಹಣವನ್ನು ಉಕ್ರೇನ್ ಗೆ ತಲುಪಿಸಲಾಗಿದೆ.
ಇದನ್ನೂ ಓದಿ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ 8 ನಿವೃತ್ತ ನೌಕಾಪಡೆ ಅಧಿಕಾರಿಗಳಿಗೆ ರಿಲೀಫ್!
ಹೊಸದಾಗಿ ಅಮೆರಿಕ ಸಂಸತ್ತು ಯಾವುದೇ ನೆರವನ್ನು ಘೋಷಣೆ ಮಾಡದೇ ಇರುವುದರಿಂದ, ಕೊನೆಯ ಕಂತಿನ ಹಣವನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ. ತೀರಾ ತುರ್ತು ಸನ್ನಿವೇಷ ಉಂಟಾದಲ್ಲಿ ಅಮೆರಿಕ ಇನ್ನೂ 50 ಮಿಲಿಯನ್ ಡಾಲರ್ ನ್ನು ಹೆಚ್ಚುವರಿಯಾಗಿ ನೀಡುವ ಸಾಧ್ಯತೆಗಳಿವೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.