ನವದೆಹಲಿ: ದೇಶದಲ್ಲಿ ಅಕ್ಕಿ ಬೆಲೆ ಭಾರೀ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ತೀರ್ಮಾನಿಸಿದೆ.
ಭಾರತ್ ಬ್ರ್ಯಾಂಡ್ ಅಡಿಯಲ್ಲಿ ನಾಫೆಡ್, ಎನ್‌ಸಿಸಿಎಫ್, ಕೇಂದ್ರೀಯ ಭಂಡಾರ್ ಔಟ್‌ಲೆಟ್‌ಗಳ ಮೂಲಕ ಕೆಜಿಗೆ 25 ರೂಪಾಯಿ ದರದಲ್ಲಿ ಕೇಂದ್ರ ಸರ್ಕಾರ ಅಕ್ಕಿಯನ್ನು ಮಾರಾಟ ಮಾಡಲಿದೆ. ಈ ಮೂಲಕ ಅಕ್ಕಿ ಬೆಲೆ ನಿಯಂತ್ರಣಕ್ಕೆ ಕೈ ಹಾಕಿದೆ. ಇದನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ಕೇಂದ್ರೀಯ ಭಂಡಾರ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ‘ಮುಸ್ಲಿಂ ಲೀಗ್’ ಬ್ಯಾನ್: ಕೇಂದ್ರ ಸಚಿವ ಅಮಿತ್ ಷಾ!
ನವೆಂಬರ್ 6, 2023 ರಂದು ಕೇಂದ್ರ ಸರ್ಕಾರವು ‘ಭಾರತ್ ಅಟ್ಟಾ’ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕೆಜಿಗೆ 27.50 ರೂ. ನಿಗದಿಪಡಿಸಿದೆ. ಇದು 10 ಕೆಜಿ ಮತ್ತು 30 ಕೆಜಿ ಪ್ಯಾಕ್‌ಗಳಲ್ಲಿ ಲಭ್ಯವಿದೆ. ಗೋಧಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಗೋಧಿ ಹಿಟ್ಟಿನ ಪ್ಯಾಕ್‌ನ್ನು ಬಿಡುಗಡೆ ಮಾಡಿದೆ.