Monday, December 23, 2024

ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಶಿರಚ್ಚೇದಕ್ಕೆ ಸುಫಾರಿ: ದೂರು ದಾಖಲು

ನವದೆಹಲಿ: ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಅವರಿಗೆ ಆಂಧ್ರ ಪ್ರದೇಶದ ವ್ಯಕ್ತಿಯೊಬ್ಬರು ವರ್ಮಾ ಶಿರಚ್ಛೇದಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ . ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಕೋಲಿಕಪುಡಿ ಶ್ರೀನಿವಾಸ ರಾವ್ ಎಂಬುವವರು ಈ ಬೆದರಿಕೆ ಹಾಕಿದ್ದಾರೆ. ಈ ಕುರಿತು ವ್ಯಕ್ತಿಯ ವಿರುದ್ಧ ಆಂಧ್ರ ಪ್ರದೇಶ ಪೊಲೀಸರಿಗೆ ವರ್ಮ ದೂರು ನೀಡಿದ್ದಾರೆ.

ಶಿರಚ್ಚೇದಕ್ಕೆ ಕರೆ ನೀಡಿರುವ ಕೋಲಿಕಪುಡಿ ಶ್ರೀನಿವಾಸ ರಾವ್ ಅವರ ವಿಡಿಯೋ ಕ್ಲಿಪ್ ನ್ನು ನಿರ್ದೇಶಕ ರಾಮ್​ ಗೋಪಾಲ್ ವರ್ಮ ತಮ್ಮ ಎಕ್ಸ್​ ಖಾತೆಯಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಯಾರಾದರೂ ರಾಮ್ ಗೋಪಾಲ್ ವರ್ಮಾ ಅವರ ತಲೆ ಕಡಿದು ತಂದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಶ್ರೀನಿವಾಸ್ ರಾವ್ ಹೇಳುತ್ತಾರೆ.

ಇದನ್ನೂ ಓದಿ: ಮಂತ್ರಿ ಮಾಲ್‌ಗೆ ಬೀಗ ಹಾಕಿದ BBMP! 

ತಮ್ಮ ಎಕ್ಸ್ ಖಾತೆಯಲ್ಲಿ ಕ್ಲಿಪ್‌ಗಳನ್ನು ಹಂಚಿಕೊಂಡ ಆರ್‌ಜಿವಿ ಆಂಧ್ರಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ, ತಮ್ಮ ಟ್ವೀಟ್‌ಗಳನ್ನು ಅಧಿಕೃತ ದೂರು ಎಂದು ಪರಿಗಣಿಸುವಂತೆ ವಿನಂತಿಸಿದ್ದಾರೆ. ಆತ್ಮೀಯ ಆಂಧ್ರ ಪ್ರದೇಶ ಪೊಲೀಸ್ ಶ್ರೀನಿವಾಸರಾವ್ ನನ್ನನ್ನು ಕೊಲ್ಲಲು 1 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಆತನಿಗೆ ಟಿವಿ5 ಚಾನೆಲ್‌ನ ಆ್ಯಂಕರ್ ಬಹಳ ಬುದ್ಧಿವಂತಿಕೆಯಿಂದ ಸಹಾಯ ಮಾಡಿದ್ದಾರೆ. ಆತ ನನ್ನ ಮೇಲೆ 3 ಬಾರಿ ಕಾಂಟ್ರಾಕ್ಟ್ ಕಿಲ್ಲಿಂಗ್ ಬಗ್ಗೆ ಬೆದರಿಕೆ ಹಾಕುವ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಿ, ದಯವಿಟ್ಟು ಇದನ್ನು ನನ್ನ ಅಧಿಕೃತ ದೂರು ಎಂದು ಪರಿಗಣಿಸಿ. ಮತ್ತು ಸೂಕ್ತ ಕ್ರಮ ಕೈಗೊಳ್ಳಿ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES