Tuesday, December 24, 2024

ಶಿವಮೊಗ್ಗ: ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್ ಮಾಡಿಸಿದ ಮುಖ್ಯ ಶಿಕ್ಷಕರು

ಶಿವಮೊಗ್ಗ: ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆ ಆಂದ್ರಹಳ್ಳಿಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್​ ಮಾಡಿಸುತ್ತಿರುವ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

ಭದ್ರಾವತಿ ತಾಲ್ಲೂಕಿನ ಕೋಮಾರನಹಳ್ಳಿ ಗ್ರಾ. ಪಂ ನ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿರುವ ಶಿಕ್ಷಕರು ವಿಡಿಯೋ ವೈರಲ್ ಆಗಿದ್ದು, ಶಿಕ್ಷಣ ಸಚಿವರ ತವರಲ್ಲೇ ಇಂತಹದೇ ಎಡವಟ್ಟು ನಡೆದಿದೆ.

ಮುಖ್ಯ ಶಿಕ್ಷಕರ ಸಮ್ಮುಖದಲ್ಲೇ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಕಾರ್ಯವನ್ನು ನಡೆಯಲಾಗಿದ್ದು,ದಲಿತ ಸಂಘರ್ಷ ಸಮಿತಿಯಿಂದ ಎಸಿ ಸತ್ಯನಾರಾಯಣ ಅವರಿಗೆ ದೂರು ದಾಖಲಾಗಿದೆ. ಶಿಕ್ಷಕರ ವಿರುದ್ಧ ಕ್ರಮಕ್ಕೆ ಕೈಗೊಳ್ಳುವಂತೆ DSS ಸಂಘಟನೆ ಒತ್ತಾಯ ಮಾಡಿದೆ.

 

 

 

RELATED ARTICLES

Related Articles

TRENDING ARTICLES