Friday, January 24, 2025

ಬಿಜೆಪಿಗರು ಶ್ರೀರಾಮನನ್ನು ಅಪಹರಿಸಿಬಿಟ್ಟಿದ್ದಾರೆ : ಸಂಜಯ್ ರಾವತ್

ಮುಂಬೈ : ಬಿಜೆಪಿಗರು ಶ್ರೀರಾಮನನ್ನು ಅಪಹರಿಸಿಬಿಟ್ಟಿದ್ದಾರೆ ಎಂದು ಶಿವಸೇನೆ (ಉದ್ಧವ್​ ಠಾಕ್ರೆ) ಬಣದ ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆಯವರಿಗೆ ಆಹ್ವಾನ ನೀಡುವ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ರಾಮಜನ್ಮಭೂಮಿ ಹೋರಾಟದಲ್ಲಿ ಬಿಜೆಪಿಗಿಂತಲೂ ಶಿವಸೇನೆ ಹೆಚ್ಚು ಭಾಗವಹಿಸಿದೆ. ಹಾಗಾಗಿ, ರಾಮಮಂದಿರದ ಮೇಲೆ ಬಿಜೆಪಿಗಿಂತ ಶಿವಸೇನೆಗೆ ಹೆಚ್ಚಿನ ಹಕ್ಕಿದೆ. ಆದರೆ, ಬಿಜೆಪಿಗರು ಪ್ರಭು ಶ್ರೀರಾಮನನ್ನು ಅಪಹರಿಸಿ, ರಾಮಮಂದಿರ ನಿರ್ಮಾಣದ ಕ್ರೆಡಿಟ್​ ಅನ್ನು ತಾವೇ ಪಡೆದುಕೊಳ್ಳಲು ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಮಮಂದಿರವನ್ನು ಬಿಜೆಪಿ ಆವರಿಸಿಕೊಂಡಿದೆ

ಇದು ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ರೂಪಿಸಿರುವ ಕಾರ್ಯಕ್ರಮವಾಗಿದ್ದಿದ್ದರೆ ಅದು ಬೇರೆ ಕಥೆಯಾಗುತ್ತಿತ್ತು. ಆದರೆ, ಇಡೀ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ಬಿಜೆಪಿ ಆವರಿಸಿಕೊಂಡಿದೆ. ರಾಜಕೀಯಕರಣಗೊಳಿಸಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES