Sunday, October 6, 2024

EVM ದೋಷ ಸರಿಪಡಿಸದಿದ್ದರೆ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ : ಸ್ಯಾಮ್ ಪಿತ್ರೋಡಾ

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ EVM ದೋಷಗಳನ್ನು ಸರಿಪಡಿಸದಿದ್ದರೆ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಲೋಕಸಭಾ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.

ವಿವಿಪ್ಯಾಟ್ ಚೀಟಿಗಳನ್ನು ಬಾಕ್ಸ್ ನಲ್ಲಿ ಇಡದೇ ಮತದಾರರಿಗೆ ನೀಡಬೇಕು. ಇದರಿಂದ ಜನರು ಯಾರಿಗೆ ಮತ ಹಾಕಿದ್ದಾರೆಯೋ ಅವರಿಗೆ ಅದು ಸಿಕ್ಕಿದೆಯೇ? ಅಥವಾ ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಕಾಯುತ್ತಿದ್ದೆ. ಆದರೆ, ಆಗದೇ ಇದ್ದಾಗ ಮಾತನಾಡಬೇಕಾಯಿತು. ನಾವು ಯಾವ ರೀತಿಯ ದೇಶವನ್ನು ನಿರ್ಮಿಸಬೇಕು ಎಂದು ನಿರ್ಧರಿಸಬೇಕು. 2024ರ ಚುನಾವಣೆಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಸ್ಯಾಮ್ ಪಿತ್ರೋಡಾ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

Related Articles

TRENDING ARTICLES