Wednesday, December 18, 2024

Panambur Beach: ಪಣಂಬೂರು ಬೀಚ್‌ನಲ್ಲಿ ತೇಲುವ ಸೇತುವೆ : ಪ್ರವಾಸಿಗರು ಫುಲ್​ ಖುಷ್​

ಮಂಗಳೂರು: ಪ್ರವಾಸೋದ್ಯಮದ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ.

ಹೌದು,ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಇಂದು ಆರಂಭವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಸಮುದ್ರದ ಮೇಲೆ ತೇಲುವ ಸೇತುವೆ.. ತೇಲುವ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಸುಂದರವಾದ ಕ್ಷಣಗಳನ್ನು ಆನಂದಿಸುತ್ತಿದ್ಧಾರೆ.

ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಮೊದಲ ತೇಲುವ ಸೇತುವೆಯಾಗಿದ್ದು, ಉಡುಪಿಯ ಮಲ್ಪೆ ಕಡಲತೀರದಲ್ಲಿ ಇದಕ್ಕೂ ಮೊದು ತೇಲುವ ಸೇತುವೆಯನ್ನು ನಿರ್ಮಿಸಲಾಗಿದೆ. ಕದಳಿ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಭಂಡಾರಿ ಬಿಲ್ಡರ್ಸ್ ಘಟಕವು 125 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಿದ್ದು, ಇಂದು ವಿಧಾನಸಭೆಯ ಸ್ಪೀಕರ್​ ಯುಟಿ ಖಾದರ್​ ಉದ್ಘಾಟನೆ ಮಾಡಿದ್ಧಾರೆ.

ಪ್ರವಾಸಿಗರ ಸುರಕ್ಷತೆಗಾಗಿ ಒಟ್ಟು 12 ಜೀವ ರಕ್ಷಕರು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೇಲುವ ಸೇತುವೆಯಲ್ಲಿ ನಿಂತು ಗರಿಷ್ಠ 50 ಜನರು ಸೂರ್ಯಾಸ್ತವನ್ನು ವೀಕ್ಷಿಸಬಹುದು.

 

 

RELATED ARTICLES

Related Articles

TRENDING ARTICLES