Monday, December 23, 2024

ಮಂತ್ರಿ ಮಾಲ್‌ಗೆ ಬೀಗ ಹಾಕಿದ BBMP!

ಬೆಂಗಳೂರು: ನಗರದ ಪ್ರತಿಷ್ಟಿತ ಮಂತ್ರಿಮಾಲ್​​ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದ್ದು,  ಕೋಟ್ಯಾಂತರ ರೂಗಳ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ.

ಮಂತ್ರಿ ಮಾಲ್ 2018-19ರಿಂದ ಆಸ್ತಿತೆರಿಗೆ ಪಾವತಿಸಿಲ್ಲ ಎನ್ನಲಾಗಿದೆ. ಕಳೆದ ಫೆಬ್ರವರಿ ವೇಳೆಗೆ ಈ ಮೊತ್ತ 42.69 ಕೋಟಿ ರೂ.ಗೆ ಏರಿತ್ತು. ಆ ಸಂದರ್ಭದಲ್ಲಿ ಪಾಲಿಕೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದರು. ಈಗ ಒಟ್ಟು ಮೊತ್ತ 51 ಕೋಟಿ ರೂ.ಗೆ ಏರಿದೆ. ಹೀಗಾಗಿ ಮಾಲ್‌ಗೆ ಬೀಗ ಹಾಕಿಸಿದ್ದಾರೆ.

ಇದನ್ನೂ ಓದಿ: ಟ್ರಿಪ್ ಗೆ ಹೋಗಿದ್ದ ವೇಳೆ ವಿದ್ಯಾರ್ಥಿಗೆ ಕಿಸ್ ಕೊಟ್ಟ ಶಿಕ್ಷಕಿ : ಫೋಟೋ ವೈರಲ್

ಸದ್ಯ ಪಾಲಿಕೆಗೆ ಆದಾಯ ಕೊರತೆ ಉಂಟಾಗಿರುವ ಕಾರಣ ವಿವಿಧ ಸಂಪನ್ಮೂಲಗಳಿಂದ ಹಣ ಕ್ರೊಡೀಕರಣಕ್ಕೆ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಿ ತೆರಿಗೆ ಬಾಕಿ ವಸೂಲು ಮಾಡಲಾಗುತ್ತಿದೆ. ಇತ್ತೀಚಿಗೆ ಮಧ್ಯಮ ಪ್ರಮಾಣದ ವಾಣಿಜ್ಯ ಮಳಿಗೆಗಳು ಸೇರಿ 800ಕ್ಕೂ ಹೆಚ್ಚು ಅಂಗಡಿ, ಮುಂಗಟ್ಟು, ಮಾಲ್‌ಗಳಿಗೆ ಬೀಗ ಹಾಕಲಾಗಿದೆ.

RELATED ARTICLES

Related Articles

TRENDING ARTICLES