Wednesday, January 22, 2025

ದೇಶ ವಿರೋಧಿ ಚಟುವಟಿಕೆ ಹಿನ್ನೆಲೆ ‘ಮುಸ್ಲಿಂ ಲೀಗ್’ ಬ್ಯಾನ್​​: ಕೇಂದ್ರ ಸಚಿವ ಅಮಿತ್​ ಷಾ!

ನವದೆಹಲಿ: ದೇಶವಿರೋಧಿ ಚಟುವಟಿಕೆಗಳಿಂದಾಗಿ ಯುಎಪಿಎ ಅಡಿಯಲ್ಲಿ ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ ಸಂಘಟನೆಯನ್ನು ಅನ್ನು ಕೇಂದ್ರ ಸರ್ಕಾರ 5 ವರ್ಷ ನಿಷೇಧಿಸಿದೆ.

ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರವನ್ನ ಯುಎಪಿಎ ಅಡಿಯಲ್ಲಿ ಅಕ್ರಮ ಸಂಘಟನೆ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಸಂಘಟನೆ ಸದಸ್ಯರು ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಾರೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಜನರನ್ನು ಪ್ರಚೋದಿಸುತ್ತಾರೆ.

ಇದನ್ನೂ ಓದಿ: ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಶಿರಚ್ಚೇದಕ್ಕೆ ಸುಫಾರಿ: ದೂರು ದಾಖಲು

ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುವವರನ್ನು ಯಾವುದೇ ಬೆಲೆಗೆ ಉಳಿಸಲಾಗುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಂದೇಶವಾಗಿದೆ ಎಂದು ಅಮಿತ್ ಷಾ ತಿಳಿಸಿದ್ದಾರೆ. ಗೃಹ ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ 42 ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಲಾಗಿದೆ. ಅವುಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಅನೇಕ ಖಲಿಸ್ತಾನಿ ಸಂಘಟನೆಗಳು, ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, ಎಲ್‌ಟಿಟಿಇ ಮತ್ತು ಅಲ್ ಖೈದಾ ಮುಂತಾದ 42 ಸಂಘಟನೆಗಳು ಸೇರಿವೆ.

RELATED ARTICLES

Related Articles

TRENDING ARTICLES