Wednesday, January 22, 2025

ಅಯ್ಯಪ್ಪ ಭಕ್ತಾದಿಗಳು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಓರ್ವ ಸಾವು

ಕೊಡಗು: ಶಬರಿಮಲೆ ಅಯ್ಯಪ್ಪ ಭಕ್ತಾದಿಗಳು ಪ್ರಯಾಣಿಸುತ್ತಿದ್ದ ಕಾರು ಭೀಕರವಾಗಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.

ಅಪಘಾತದ ಪರಿಣಾಮ ಚಂದ್ರ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ದುರ್ದೈವಿಯಾದ ಚಂದ್ರ ಎಂಬುವವರು ಕುಶಾಲನಗರದ ಹಾರಂಗಿ ನಿವಾಸಿ. ಅಪಘಾತಕ್ಕೀಡಾಗಿರೋ ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು. ಆಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಫೇಸ್​ ಬುಕ್​ ಯೂಸ್​ ಮಾಡೋ ಮಹಿಳೆಯರೇ ಹುಷಾರ್​ ; ಸ್ವಲ್ಪ ಯಾಮಾರಿದ್ರು ಪಂಗನಾಮ ಗ್ಯಾರಂಟಿ.!

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಗಂಭೀರವಾಗಿ ಗಾಯಗೊಂಡ ಕುಶಾಲನಗರದ ಲಿಂಗಂ, ಹರೀಶ್, ಸಂತೋಷ್​ರನ್ನು ಪೆರಂಬೂರಿನ ರಾಜಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

RELATED ARTICLES

Related Articles

TRENDING ARTICLES