Monday, December 23, 2024

ನೆಲಮಂಗಲದಲ್ಲಿ ಬೆಳ್ಳಂ ಬೆಳಗ್ಗೆ ಸರಣಿ ಅಪಘಾತ!: 30 ಜನರಿಗೆ ಗಂಭೀರ ಗಾಯ

ನೆಲಮಂಗಲ: ಖಾಸಗಿ ಬಸ್​ಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4 ರ ತೊಣಚಿನ ಕುಪ್ಪೆ ಬಳಿ ನಡೆದಿದೆ.

ಇಂದು ಮುಂಜಾನೆ ದಟ್ಟವಾದ ಮಂಜು ಆವರಿಸಿದ್ದ ಹಿನ್ನೆಲೆ ನೆಲಮಂಗಲ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಬರುತ್ತಿದ್ದ ದುರ್ಗಾಂಬ, ಶಿವಗಂಗಾ, ಧ್ಯಾನ್​ ಹೆಸರಿನ ಮೂರು ಖಾಸಗಿ ಬಸ್​ ಗಳು ಡಿಕ್ಕಿ ಹೊಡೆದುಕೊಂಡಿದ್ದು ಬಸ್​ ನಲ್ಲಿದ್ದ 30 ಜನರಿಗೆ ಗಂಭೀರ ಗಾಯವಾಗಿದೆ.

ಇದನ್ನೂ ಓದಿ: ಘಾಟಿ ದನಗಳ ಜಾತ್ರೆ: ಜಾನುವಾರುಗಳಿಗೆ ಉಚಿತ ಮೇವು ವಿತರಣೆ! 

ಅಪಘಾತ ಹಿನ್ನೆಲೆ ಸುಮಾರು 7 ಅಂಬ್ಯೂಲನ್ಸ್ ಗಳ ಮುಖಾಂತರ ಗಾಯಳುಗಳನ್ನ ಅಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ಬಳಿಕ ಬಸ್​ ಗಳನ್ನು ಕ್ರೈನ್​ ಬಳಸಿ ರಸ್ತೆ ಮಧ್ಯದಿಂದ ತೆರವು ಮಾಡಲಾಗಿದೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES