Monday, December 23, 2024

ಮಗುವಿನ ಮೇಲೆ ಹರಿದ ಇನೋವಾ ಕಾರು!: ಮಗು ಧಾರುಣ ಸಾವು

ಬೀದರ್: ಎರಡು ವರೆ ವರ್ಷದ ಮಗುವಿನ ಮೇಲೆ ಇನ್ನೋವಾ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೆ ಸಾವನಪ್ಪಿರುವ ಧಾರುಣ ಘಟನೆ ಬೀದರ್​ ನಗರದ ಗುರುಪಾದಪ್ಪಾ ನಾಗಮಾರಪಳ್ಳಿ ಆಸ್ಪತ್ರೆ ಮುಂಭಾಗದಲ್ಲಿ‌ ಹಾರೋಗೆರಿ ಬಳಿ ನಡೆದಿದೆ.

ಇದನ್ನೂ ಓದಿ: PSI ಹಗರಣ: HDK ಸೇರಿ ಹಲವರಿಗೆ ಕೋರ್ಟ್​ ನೋಟಿಸ್!

ಹಾರುಗೇರಿ ನಿವಾಸಿ ಸತೀಶ್ ಪಾಟೀಲ್ ಮತ್ತು ಸಂಗೀತಾ ದಂಪತಿ ಪುತ್ರ. ಎರಡೂವರೆ ವರ್ಷದ ಬಸವಚೇತನ ಮನೆ ಮುಂದೆ ಆಟವಾಡುತ್ತ ಇದ್ದಕ್ಕಿದ್ದಂತೆ ರಸ್ತೆಗೆ ಓಡಿ ಬಂದಿದೆ , ಈ ವೇಳೆ ರಸ್ತೆ ತಿರುವಿನಲ್ಲಿ ಬಂದ ಕಾರು ಮಗುವಿನ ಮೇಲೆ ಹರಿದಿದ್ದು ಮಗು ಸ್ಥಳದಲ್ಲೇ ಮೃತ ಪಟ್ಟಿದೆ. ಮಗುವಿನ ಮೇಲೆ ಕಾರು ಹರಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಗಾಂಧಿಗಂಜ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES