Sunday, December 22, 2024

‘ಶ್ರೀಗೌರಿ’ಯಾಗಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ‘ಕಮಲಿ’

ಬೆಂಗಳೂರು: ಕಮಲಿ ಎಂದೇ ಮನೆ ಮಾತಾದ ನಟಿ ಅಮೂಲ್ಯ ಗೌಡ ಇದೀಗ ಶ್ರೀಗೌರಿಯಾಗಿ ಮತ್ತೆ ಕಿರುತೆರೆಗೆ ಬರುತ್ತಿದ್ದಾರೆ. 

ಹೌದು, ಕಲರ್ಸ್ ಕನ್ನಡ ವಾಹಿನಿಯ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿ ಪ್ರೋಮೋದಲ್ಲಿ ನಟಿ ಅಮೂಲ್ಯ ಲುಕ್ ರಿವೀಲ್ ಆಗಿದೆ. ಗೌರಿ ಆಗಿ ಕಿರುತೆರೆ ಲೋಕದಲ್ಲಿ ಬೆಳಗಲು ಅಮೂಲ್ಯ ಸಜ್ಜಾಗಿದ್ದಾರೆ.

ಪ್ರೊಮೋದಲ್ಲಿ ಪ್ರತಿ ಇರುವೆಗೂ ಕೂಡ ನೋವು ಆಗದೆ ಇರುವ ಹಾಗೆ ನೋಡಿಕೊಳ್ಳುತ್ತಾ ಇರುವ ಹುಡುಗಿ, ಯಾವ ರೀತಿ ಲೆಕ್ಕ ಹಾಕಿದರೂ ಇವಳೇ ಸರಿ, ಯಾವಾಗಲೂ ಹೀಗೆ ಪ್ರೀತಿಯಲ್ಲಿ ನನ್ನ ಕಟ್ಟಿ ಹಾಕಿ ಬಿಡುತ್ತಾಳೆ, ನನ್ನ ಮಗಳು, ನನ್ನ ಉಸಿರು, ನನ್ನ ಗೌರಿ, ಆದರೆ ರಾತ್ರಿ ಹೊತ್ತಿಗೆ ನನ್ನ ಉಸಿರೇ ನಿಂತು ಹೋಗುತ್ತೆ, ಮುದ್ದಿನ ಮಗಳಿಗೆ ಪ್ರತಿ ರಾತ್ರಿ ಗ್ರಹಣ ಎಂದು ಪ್ರೋಮೋದಲ್ಲಿದೆ.

ತಂದೆ ಮತ್ತು ಮಗಳ ಬಾಂಧವ್ಯ ಸಾರುವ ಕಥೆಯಾಗಿದ್ದು, ತಂದೆ ಪಾತ್ರದಲ್ಲಿ ಸುನೀಲ್ ಪುರಾಣಿಕ್ ಅಭಿನಯಿಸಿದ್ದಾರೆ. ಮಗಳು ಗೌರಿಯಾಗಿ ಅಮೂಲ್ಯ ಗೌಡ ಬಣ್ಣ ಹಚ್ಚಿದ್ದಾರೆ. ನಾಯಕಿ ಅಮೂಲ್ಯ ಎಂಬುದು ರಿವೀಲ್ ಆಗಿದೆ. ಆದರೆ ನಾಯಕ ನಟ ಯಾರು ಎಂಬುದನ್ನು ಕಲರ್ಸ್ ಕನ್ನಡ ವಾಹಿನಿ ಬಿಟ್ಟು ಕೊಟ್ಟಿಲ್ಲ.

ಇಷ್ಟು ದಿನ ನೀವೆಲ್ಲಾ ಕೊಟ್ಟ ಪ್ರೀತಿಗೆ ಚಿರರುಣಿ

ಇಷ್ಟು ದಿನ ನೀವೆಲ್ಲಾ ಕೊಟ್ಟ ಪ್ರೀತಿಗೆ ಚಿರರುಣಿ. ಈಗ ಕಲರ್ಸ್ ಕನ್ನಡದ ಮೂಲಕ ಶ್ರೀಗೌರಿಯಾಗಿ ನಿಮ್ಮ ಮುಂದೆ ಬರ್ತಿದ್ದೀನಿ. ಮೊದಲಿಗಿಂತ ದುಪ್ಪಟ್ಟು ಪ್ರೀತಿಯಿಂದ ಮೆಚ್ಚಿ ಹಾರೈಸ್ತೀರ ಅಲ್ವಾ? ಎಂದು ಅಮೂಲ್ಯಗೌಡ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಬಿಗ್ ಬಾಸ್ ಸೀಸನ್ 9ರಲ್ಲಿ ನಟಿ ಅಮೂಲ್ಯ ಕಾಣಿಸಿಕೊಂಡ ಮೇಲೆ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದರು. ಈಗ ‘ಶ್ರೀಗೌರಿ’ ಎಂಬ ಹೊಸ ಧಾರಾವಾಹಿಯನ್ನ ನಟಿ ಅಭಿನಯಿಸಿದ್ದಾರೆ.

 

 

RELATED ARTICLES

Related Articles

TRENDING ARTICLES