Tuesday, January 28, 2025

Shocking News: ರೀಲ್ಸ್‌ನಲ್ಲಿ ಮೋಡಿ ಮಾಡಿ 4 ಮದುವೆಯಾದ ಲೇಡಿ; ಗಂಡ ಶಾಕ್!‌

ದಾವಣಗೆರೆ: ಹೆಂಡತಿ ಗರ್ಭಿಣಿಯಾಗಿದ್ದಾಳೆ, ತವರಿನಲ್ಲಿ ಖುಷಿಯಾಗಿರಲಿ ಅಂತ ಕಳುಹಿಸಿಕೊಡೋ ಮುನ್ನ ಮತ್ತೊಮ್ಮೆ ಯೋಚನೆ ಮಾಡಬೇಕಾದ ಸನ್ನಿವೇಶವನ್ನು ಇಲ್ಲೊಬ್ಬ ಪುಣ್ಯಾತಿಗಿತ್ತಿ ನಿರ್ಮಾಣ ಮಾಡಿದ್ದಾಳೆ. ತವರಿಗೆ ಹೋಗಿದ್ದ ಹೆಂಡತಿ ಅಲ್ಲಿಂದಲೂ ನಾಪತ್ತೆಯಾದ ಹಿನ್ನೆಲೆಯಲ್ಲಿ ಗಂಡ ಮಿಸ್ಸಿಂಗ್‌ ಕಂಪ್ಲೇಂಟ್‌  ಕೊಟ್ಟಿದ್ದಾನೆ.

ಈ ನಡುವೆ, ಆಕೆಯ ಫೋಟೊವನ್ನು ಇನ್ನೊಬ್ಬನ ಜತೆ ನೋಡಿದಾಗ ಅವನಿಗೆ ಶಾಕ್‌ ಆಗಿದೆ. ಕೊನೆಗೆ ಹೋಗಿ ನೋಡಿದರೆ ಗರ್ಭಿಣಿ ಎಂದು ತವರಿಗೆ ಹೋದವಳು ಇನ್ನೊಬ್ಬನ ಜತೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಾಳೆ. ಹಾಗಿದ್ದರೆ ಅವಳು ಗರ್ಭಿಣಿ ಅಂದಿದ್ದೇ ಸುಳ್ಳಾ? ಎರಡನೇ ಮದುವೆ ಹೇಗಾಯ್ತು? ಈ ಇಂಟರೆಸ್ಟಿಂಗ್‌ ಸ್ಟೋರಿ ಓದಿ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ನರಹಳ್ಳಿ ಗ್ರಾಮದ‌ ಯುವತಿ ಸ್ನೇಹಾ ಅಲಿಯಾಸ್‌ ನಿರ್ಮಲಾಳನ್ನು ದಾವಣಗೆರೆಯ ಪ್ರಶಾಂತ್‌ ಬಿ ಎಂಬಾತ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿಯನ್ನು ಪರಿಗಣಿಸಿದ ಮನೆಯವರು 2022ರ ಫೆಬ್ರವರಿ 19ರಂದು ಗುರುಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು.

ಇದನ್ನೂ ಓದಿ: ಫೇಸ್​ ಬುಕ್​ ಯೂಸ್​ ಮಾಡೋ ಮಹಿಳೆಯರೇ ಹುಷಾರ್​ ; ಸ್ವಲ್ಪ ಯಾಮಾರಿದ್ರು ಪಂಗನಾಮ ಗ್ಯಾರಂಟಿ.!

ಇದಾಗಿ ಒಂದುವರೆ ವರ್ಷ ಅವರಿಬ್ಬರು ಹಕ್ಕಿಗಳಂತೆ ಹಾರಾಡುತ್ತಾ ಖುಷಿಯಾಗಿದ್ದರು. ಈ ನಡುವೆ ಮೂರು ತಿಂಗಳ ಹಿಂದೆ ಆಕೆ ಗರ್ಭಿಣಿಯಾದಳು. ಪ್ರಶಾಂತನೋ ಸ್ವಲ್ಪ ಹೆಂಗರುಳು. ಗರ್ಭಿಣಿಯಾಗಿರುವ ಹೆಂಡತಿ ತವರು ಮನೆಯಲ್ಲಿದ್ದರೆ ಚೆನ್ನಾಗಿರುತ್ತದೆ ಎಂದು ಅಲ್ಲಿಗೆ ಕಳುಹಿಸಿ ತಾನು ಆಗಾಗ ಹೋಗಿ ಬರುತ್ತಿದ್ದ. ಈ ನಡುವೆ, ಆಕೆ ಒಮ್ಮಿಂದೊಮ್ಮೆಗೆ ನಾಪತ್ತೆಯಾಗಿದ್ದಾಳೆ. ತವರಿನಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಲಿಲ್ಲ.

ಈ ನಡುವೆ, ಪತಿ ಪ್ರಶಾಂತ್ ಬಿ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಗೆ ಹೋಗಿ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ಕೋಲುಮುಖ, 5 ಅಡಿ 4 ಇಂಚು ಎತ್ತರವಿರುವ ನನ್ನ ಹೆಂಡತಿ ಸ್ನೇಹಾ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾನೆ. ಇದರ ನಡುವೆ, ಪ್ರಶಾಂತ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ನೋಡುತ್ತಿದ್ದಾಗ ಅವನ ಹೆಂಡತಿಯೇ ಎದುರಾಗಿಬಿಟ್ಟಳು. ಪಕ್ಕದಲ್ಲೊಬ್ಬ ಗಂಡನೆಂಬ ಗಂಡಸು! ಅವನು ಗಂಡನಾದರೆ ನಾನು ಏನು ಎನ್ನುವ ಪ್ರಶ್ನೆ ಒಂದೆಡೆಯಾದರೆ ನನ್ನಿಂದಾದ ಗರ್ಭ ಎಲ್ಲಿ ಎನ್ನುವುದು ಇನ್ನೊಂದು ಪ್ರಶ್ನೆ. ಈ ಎಲ್ಲ ವಿಚಾರಗಳನ್ನು ಪೊಲೀಸರಿಗೆ ತಿಳಿಸಿದ ಆತ ನನಗೆ ನ್ಯಾಯ ಕೊಡಿ ಎಂದಿದ್ದಾನೆ.

ರಂಗು ರಂಗಿನ ರೀಲ್ಸ್‌ ಮೋಡಿ!

ನಿಜವೆಂದರೆ ಪ್ರಶಾಂತ್‌ ಮತ್ತು ಸ್ನೇಹಾ ಪ್ರೀತಿ ಹುಟ್ಟಿದ್ದು ಇನ್‌ಸ್ಟಾ ಗ್ರಾಂನಲ್ಲಿ. ಸ್ನೇಹಾ ಇನ್‌ಸ್ಟಾದಲ್ಲಿ ರೀಲ್ಸ್‌ ಮಾಡೋದರಲ್ಲಿ ಎಕ್ಸ್‌ಪರ್ಟ್‌ ಅಂತೆ. ತುಂಬ ಭಾವುಕ, ತುಂಬ ರೊಮ್ಯಾಂಟಿಕ್‌ ರೀಲ್ಸ್‌ ಮಾಡಿದ್ದನ್ನು ನೋಡಿದ ಪ್ರಶಾಂತ್‌ ಆಕೆಯ ಪ್ರೇಮ ಜಾಲದಲ್ಲಿ ಬಿದ್ದಿದ್ದ. ಕೇಳಿದ್ದಕ್ಕೆ ಆಕೆಯೂ ಒಪ್ಪಿ ಇಬ್ಬರೂ ಪ್ರಣಯ ಪಕ್ಷಿಗಳಾಗಿ ಹಾರಾಡಿದ್ದರು. ನಂತರ ನಡೆದದ್ದು ಮದುವೆ. ಅಲ್ಲಿಂದಾಚೆ ಆಕೆ ಗರ್ಭಿಣಿಯೂ ಆದಳು.

ಹಾಗಿದ್ದರೆ ಮಗು ಏನಾಯ್ತು?

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋಯರ್ಸ್‌ ಹೊಂದಿರುವ ಆಕೆ ಊರಿಗೆ ಹೋದವಳೇ ಗರ್ಭಿಣಿಯಾದರೆ, ಮಕ್ಕಳಾದರೆ ರೀಲ್ಸ್‌ ಮಾಡುವುದಕ್ಕೆ ಕಷ್ಟವಾಗುತ್ತದೆ ಅಂತ ಟ್ಯಾಬ್ಲೆಟ್ಸ್‌ ತೆಗೆದುಕೊಂಡಿದ್ದಾಳೆ. ನಂತ್ರ ಮತ್ತೆ ರೀಲ್ಸ್‌ ಶುರು ಮಾಡಿದ್ದಾಳೆ. ಆಗ ಸಿಕ್ಕಿದವನೇ‌ ಇನ್ನೊಬ್ಬ ಗಂಡ.

ಅವಳಿಗೆ ಮದುವೆ ಹೇಗಾಯ್ತು? ಮಾಡಿಕೊಂಡಿದ್ದು ಹೇಗೆ ಎಂದೆಲ್ಲ ಹುಡುಕುತ್ತಾ ಹೋದ ದಾವಣಗೆರೆಯ ಪ್ರಶಾಂತನಿಗೆ ಅವಳಿಗೆ ತಾನು ಮೊದಲನೇ ಗಂಡನೂ ಅಲ್ಲ. ಕೊನೆಯ ಗಂಡನೂ ಅಲ್ಲ ಅಂತ ಅಂತ. ಅಂದರೆ, ಈಗ ಆಕೆ ಮದುವೆಯಾಗಿ ಸಂಸಾರ ಮಾಡುತ್ತಿರುವುದು ನಾಲ್ಕನೇ ಗಂಡನ ಜತೆ ಅನ್ನೋದು ಪ್ರಶಾಂತ್‌ ಸಂಶೋಧನೆ!

ಅಂದರೆ ಪ್ರಶಾಂತ್‌ನನ್ನು ಮದುವೆಯಾಗೋ ಪೂರ್ವದಲ್ಲಿ ಆಕೆ ಮೈಸೂರು ಮತ್ತು ಬೆಂಗಳೂರಿನ ಒಬ್ಬರನ್ನು ಮದುವೆಯಾಗಿ ವಂಚನೆ ಮಾಡಿದ್ದಾಳೆ ಎನ್ನಲಾಗಿದೆ. ಅಂದರೆ ಆಕೆಗೆ ಇನ್‌ಸ್ಟಾ ಗ್ರಾಂನಲ್ಲಿ ರೀಲ್ಸ್‌ ಮಾಡಿ ಹುಡುಗರನ್ನು ಯಾಮಾರಿಸುವುದೇ ಅವಳ ಕಾಯಕ ಎನ್ನುತ್ತಾನೆ ಪ್ರಶಾಂತ್‌.

ಯಾರೂ ಕೂಡಾ ಆಕೆಯ ರೀಲ್ಸ್‌ ನೋಡಿ ಮರುಳಾಗಬೇಡಿ. ಆಕೆ ನಿಮ್ಮನ್ನೂ ಮೋಸದ ಬಲೆಗೆ ಸಿಲುಕಿಸಬಹುದು ಎಂದು ಹೇಳುವ ಪ್ರಶಾಂತ್‌, ಪುರುಷರು ನಾಲ್ಕು ಮದುವೆ ಆದ್ರೆ ತಪ್ಪು. ಆದ್ರೆ ಮಹಿಳೆ ನಾಲ್ಕು, ಐದು ಮದುವೆ ಆಗಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.

ನನಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು ಎಂದು ದೂರು ದಾಖಲಿಸಿರುವ ಪತಿ ರಾಯ ಪ್ರಶಾಂತ್, ರೀಲ್ಸ್ ನಲ್ಲಿ ರಂಗಿನಾಟ ನೋಡಿ ನಾನು ಮದುವೆಯಾದೆ. ಆದರೆ, ಒಂದುವರೆ ವರ್ಷದಲ್ಲಿ ನನಗೆ ಕೈಕೊಟ್ಟಳು. ನನ್ನ ಮದುವೆಗೂ ಮುನ್ನ ಆಕೆ ಎರಡು ಮದುವೆಯಾಗಿದ್ದಾಳೆ. ನನ್ನ ಬಳಿಕ ಇನ್ನೊಬ್ಬನನ್ನು ಕಟ್ಟಿಕೊಂಡಿದ್ದಾಳೆ ಎಂದು ತಿಳಿದು ಬೇಜಾರಾಯಿತು.

ನಾನು ಆಗಿದ್ದು ಮೊದಲ ಮದುವೆ. ಆದರೆ, ಅವಳಿಗೆ ಆಗಲೇ ಎರಡು ಮದುವೆ ಆಗೋಗಿತ್ತು. ಪತ್ನಿಯಿಂದ ನನಗೆ ಆದ ಅನ್ಯಾಯ ಬೇರೆಯವರಿಗೆ ಆಗುವುದು ಬೇಡ. ನಾನು ರೀಲ್ಸ್ ನೋಡಿ ಪ್ರೀತಿಸಿ ಮದುವೆ ಆದೆ. ರೀಲ್ಸ್ ಮೇಕಪ್ ನೋಡಿ ಮೋಸಹೋದೆ ಎಂದಿದ್ದಾರೆ. ರೀಲ್ಸ್‌ ಹುಡುಗಿಯರ ಬಲೆಗೆ ಬೀಳಬೇಡಿ ಎನ್ನುವುದು ಪ್ರಶಾಂತ್‌ ಒನ್‌ ಲೈನ್‌ ಸಲಹೆ.

 

 

RELATED ARTICLES

Related Articles

TRENDING ARTICLES