ಕೇರಳ: ನಮಗಿಲ್ಲಿ ಕುಡಿಯಲು ನೀರಿಲ್ಲ. ಹಸಿವಾಗುತ್ತಿದ್ದರೂ ತಿನ್ನಲು ಅನ್ನವಿಲ್ಲ. ಅಯ್ಯೋ ನಿಮ್ಮ ಕೈ ಮುಗಿತೀವಿ ದಯವಿಟ್ಟು ಯಾರೂ ಶಬರಿಮೆಲೆಗೆ ಬರಬೇಡಿ ಇದು ಕೇರಳದ ಶಬರಿಮಲೆಯಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಕನ್ನಡಿಗ ಭಕ್ತರ ಗೋಳಾಗಿದೆ.
ಈ ಬಾರಿ ಶಬರಿಮಲೆಯಲ್ಲಿ ಭಾರೀ ಅವ್ಯವಸ್ಥೆ ಉಂಟಾಗಿದ್ದು, ಭಕ್ತರಿಗೆ ಯಾವುದೇ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿಯೂ ಕೇರಳ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಭಕ್ತಾದಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ!
ಇದರ ಹೊರತಾಗಿಯೂ ಪರಿಸ್ಥಿತಿಯಲ್ಲಿ ಸುಧಾರಣೆಯಾಗದ ಕುರಿತು ಶಬರಿಮೆಲೆಗೆ ತೆರಳಿರುವ ಕರ್ನಾಟಕ, ತಮಿಳುನಾಡು ಸೇರಿದಂತೆ ಇತರ ಭಕ್ತಾದಿಗಳು ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಕೇರಳ ಸರ್ಕಾರ ಹಿಡಿಶಾಪ ಹಾಕಿದ್ದಾರೆ.