ಬೆಂಗಳೂರು : ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅರ್ಧಶತಕ ಸಿಡಿಸಿದರು.
ಇಲ್ಲಿನ ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಏಕಾಂಗಿ ಹೋರಾಟದ ಮೂಲಕ ರಾಹುಲ್ ಆಸರೆಯಾದರು.
ಮೊದಲ ದಿನದ ಅಂತ್ಯಕ್ಕೆ ಭಾರತ 59 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕೆ.ಎಲ್. ರಾಹುಲ್ 105 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನೊಂದಿಗೆ ಅಜೇಯ 70* ರನ್ ಗಳಿಸಿದ್ದಾರೆ.
5 ವಿಕೆಟ್ ಕಬಳಿಸಿದ ರಬಾಡ
ರೋಹಿತ್ ಶರ್ಮಾ 5, ಯಶಸ್ವಿ ಜೈಸ್ವಾಲ್ 17, ಶುಭ್ಮನ್ ಗಿಲ್ 2, ವಿರಾಟ್ ಕೊಹ್ಲಿ 38, ಶ್ರೇಯಸ್ ಅಯ್ಯರ್ 31, ಅಶ್ವಿನ್ 5, ಶಾರ್ದೂಲ್ ಠಾಕೂರ್ 24, ಬುಮ್ರಾ 1 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 5, ನಾಂಡ್ರೆ ಬರ್ಗರ್ 2 ಹಾಗೂ ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು.
ಮಳೆಯಿಂದ ಪಂದ್ಯ ಸ್ಥಗಿತ
ಮಳೆ ಸುರಿಯುತ್ತಿರುವುದರಿಂದ ಅಂಪೈರ್ಗಳು ಪಂದ್ಯ ಸ್ಥಗಿತಗೊಳಿಸಿದ್ದಾರೆ. ದಿನದಾಟದ ಅಂತ್ಯಕ್ಕೆ ಭಾರತ 59 ಓವರ್ಗಳಲ್ಲಿ 208 ರನ್ ಗಳಿಸಿದೆ. ರಾಹುಲ್ 70* ಹಾಗೂ ಮೊಹಮ್ಮದ್ ಸಿರಾಜ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
THAT moment when @klrahul got to his half-century in Centurion. 🙌🏽 #TeamIndia #SAvIND pic.twitter.com/6O6jibCJMk
— BCCI (@BCCI) December 26, 2023