ಬೆಂಗಳೂರು: ಕನ್ನಡ ಚಿತ್ರರಂಗದ ಕ್ರಿಕೆಟ್ ಪಂದ್ಯಾಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ‘ಗಂಗ ವಾರಿಯರ್ಸ್’ ಕೆಸಿಸಿ 4ನೇ ಸೀಸನ್ನ ವಿನ್ನರ್ ಆಗಿದ್ದಾರೆ.
ಕೆಸಿಸಿ ಪಂದ್ಯಾವಳಿಗಳು ಡಿಸೆಂಬರ್ 23,24, 25 ರಂದು ನಡೆದಿತ್ತು.ಫೈನಲ್ ಪಂದ್ಯದಲ್ಲಿ ತಂಡ ಶಿವರಾಜ್ಕುಮಾರ್ ನಾಯಕತ್ವದ ‘ರಾಷ್ಟ್ರಕೂಟ ಪ್ಯಾಂತರ್ಸ್’ ತಂಡವನ್ನು ನಾಲ್ಕು ರನ್ಗಳಿಂದ ಸೋಲಿಸಿದೆ. ಈ ಮೂಲಕ ಗಣೇಶ್ ತಂಡ ನಾಲ್ಕನೇ ಸೀಸನ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕಿಚ್ಚ ಸುದೀಪ್, ಶಿವಣ್ಣ. ಡಾಲಿ ಧನಂಜಯ್, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್ ನಟ, ನಟಿಯರು ಪಾಲ್ಗೊಂಡಿದ್ದರು.
ಮೂರು ದಿನಗಳ ಕಾಲ ನಡೆದಿದ್ದ ಈ ಟೂರ್ನಿಗೆ 23ರ ಸಂಜೆ ಅದ್ಧೂರಿ ಚಾಲನೆ ಸಿಕ್ಕಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆದವು. ಪಂದ್ಯವಾವಳಿಗೆ ಸಪರೇಟ್ ಟಿಕೆಟ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು ಮೊದಲ ಬಾರಿಗೆ ಹಲವು ಕಿರುತೆರೆ ಕಲಾವಿದರು ಕೂಡ ಕೆಸಿಸಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠೆ: ಮಾಜಿ ಸಿಎಂ HDK ಕುಟುಂಬಕ್ಕೆ ಆಹ್ವಾನ!
ಗಣೇಶ್ ತಂಡ ಲೀಗ್ ಮ್ಯಾಚ್ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ನ ಗೆದ್ದಿತ್ತು. ಫಿನಾಲೆ ತಲುಪಿ ಕಪ್ ಗೆದ್ದಿದೆ. ಶಿವಣ್ಣನ ನಾಯಕತ್ವದ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಗಣೇಶ್ ಅವರಿಗೆ ಕನ್ನಡ ಚಲನಚಿತ್ರ ಕಪ್ ಅನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿದರು.
ತಂಡಗಳು ಹಾಗೂ ನಾಯಕರ ಹೆಸರು ಹೀಗಿವೆ:
2) ಕದಂಬ ಲಯನ್ಸ್: ಕ್ಯಾಪ್ಟನ್ ರಾಜೀವ್, ಸ್ಟಾರ್ ಡಾಲಿ ಧನಂಜಯ್.
3) ಗಂಗಾ ವಾರಿಯರ್ಸ್: ಕ್ಯಾಪ್ಟನ್ ಪ್ರಿನ್ಸ್. ಸ್ಟಾರ್ ಗಣೇಶ್.
4) ರಾಷ್ಟ್ರಕೂಟ ಪ್ಯಾಂತರ್ಸ್: ಕ್ಯಾಪ್ಟನ್ ಪ್ರದೀಪ್, ಸ್ಟಾರ್ ಶಿವಣ್ಣ.
ಮೂರು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಗೆ ವರ್ಣರಂಜಿತ ತೆರೆ ಕೂಡ ಬಿತ್ತು. ಸಮಾರೋಪ ಸಮಾರಂಭದಲ್ಲಿ ಶಿವಣ್ಣ, ಗಣೇಶ್, ಉಪೇಂದ್ರ, ದುನಿಯಾ ವಿಜಯ್, ಸುದೀಪ್ ಹಾಡುಗಳಿಗೆ ನೃತ್ಯ ಮಾಡಿದರು. ಆಲ್ ಓಕೆ ಅಲೋಕ್, ಚಂದನ್ ಶೆಟ್ಟಿ ಅವರ ರ್ಯಾಪ್ ಹಾಡುಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿದವು. ಸಮಾರಂಭದಲ್ಲಿ ಅನೇಕ ನಟ, ನಟಿಯರು ಪಾಲ್ಗೊಂಡಿದ್ದರು. ರುಕ್ಕಿನಿ ವಸಂತ್, ಚೈತ್ರಾ ಆಚಾರ್, ಸಪ್ತಮಿ ಗೌಡ, ಮಾಲಾಶ್ರೀ, ಪುತ್ರಿ ಆರಾಧನಾ, ರಾಗಿಣಿ, ಭಾವನಾ, ಅನುಪಮಾ ಸೇರಿದಂತೆ ಮೊದಲಾದ ಕಲಾವಿದರು ಕಾರ್ಯಕ್ರಮಕ್ಕೆ ಮೆರುಗು ತಂದಿದ್ದಾರೆ.